ಗುರುವಾರ , ಮೇ 19, 2022
20 °C

‘ಯುವ ಜನರ ನೈಜ ಸಾಮರ್ಥ್ಯ ಬಳಕೆಗೆ ನೀತಿ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಯುವ ಜನರ ಸಬಲೀಕರಣಕ್ಕಾಗಿ ಕೇಂದ್ರ ಯುವ ನೀತಿಯ ಮಾದರಿಯಲ್ಲೇ ಕರ್ನಾಟಕ ಸರ್ಕಾರ ಯುವಜನ ಕೇಂದ್ರಿತ ಹೊಸ ನೀತಿಯೊಂದನ್ನು ರೂಪಿಸಲು ಚಾಲನೆ ನೀಡಿದೆ ಎಂದು ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ತಿಳಿಸಿದರು.

ಗುವಾಹಟಿಯಲ್ಲಿ 8ನೇ ಕಾಮನ್‌ವೆಲ್ತ್‌ ಸಂಸದೀಯ ಸಂಘ ಏರ್ಪಡಿಸಿರುವ ‘ಮುಖ್ಯವಾಹಿನಿಯ ಯುವ ಕೇಂದ್ರಿತ ನೀತಿಗಳು’ ವಿಷಯ ಕುರಿತ ಸಮ್ಮೇಳನದಲ್ಲಿ ಸೋಮವಾರ ಮಾತನಾ
ಡಿದ ಅವರು, ಕರ್ನಾಟಕದಲ್ಲಿ 15 ರಿಂದ 29 ವರ್ಷದೊಳಗಿನ ವಯಸ್ಸಿನವರು ಶೇ 30ರಿಂದ 40ರಷ್ಟು ಇದ್ದಾರೆ ಎಂದರು.

ಯುವ ಜನರು ಎದುರಿಸುತ್ತಿರುವ ಅಡ್ಡಿ– ಆತಂಕಗಳು ಮತ್ತು ಸವಾಲುಗಳನ್ನು ಅರ್ಥ ಮಾಡಿಕೊಳ್ಳುವುದರ ಜತೆಗೆ ಅವರಿಗೆ ದೈಹಿಕ, ಮಾನಸಿಕ ಮತ್ತು ಆರ್ಥಿಕ ನೆರವು ನೀಡಬೇಕು ಹಾಗೂ ಅವರ ನೈಜ ಸಾಮರ್ಥ್ಯ ಪೂರ್ಣ ಪ್ರಮಾಣದಲ್ಲಿ ಬಳಕೆಯಾಗಲು ಅವಕಾಶ ನೀಡಬೇಕು. ಈ ಉದ್ದೇಶದಿಂದ ‘ಕರ್ನಾಟಕ ಯುವ ನೀತಿ 2022’ ಅನ್ನು ಆದಷ್ಟು ಶೀಘ್ರ ಬಿಡುಗಡೆಗೊಳಿಸಲಾಗುವುದು ಎಂದು ಕಾಗೇರಿ ಹೇಳಿದರು.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು