ಬೆಂಗಳೂರು: ಬುಕ್‌ಬ್ರಹ್ಮ ಸಾಹಿತ್ಯೋತ್ಸವದಲ್ಲಿ ಸಾಹಿತ್ಯದ ಪರಿಮಳದ ಜೊತೆಗೆ, ಚಿತ್ರಕಲಾ ಪ್ರದರ್ಶನವನ್ನೂ ಆಯೋಜಿಸಲಾಗಿದೆ.
ಸಾಹಿತ್ಯೋತ್ಸವ ನಡೆಯುತ್ತಿರುವ ಸೇಂಟ್ ಜೋಸೆಫ್ ಸಭಾಂಗಣದ ಆವರಣದಲ್ಲಿ ಚಿತ್ರಕಲಾ ಪ್ರದರ್ಶನದಲ್ಲಿ ಮುದ್ರಣ ಕಲೆ, ವುಡ್ ಕಟ್ ಚಿತ್ರ, ಸಮಕಾಲೀನ ಕಲೆ, ಎಚಿಂಗ್ ಚಿತ್ರಕಲೆ, ಚಿಕಣಿ ಚಿತ್ರಕಲೆ, ಲಿಥೊಗ್ರಫಿ, ಪರಿಕಲ್ಪನಾ ಕಲೆಗಳ ಕಲಾಕೃತಿಗಳಿಗೆ ಕಲಾಸಕ್ತರು ಮೆಚ್ಚುಗೆ ವ್ಯಕ್ತಪಡಿಸಿದರು.
ಇದೇ ಕಲಾ ಪ್ರದರ್ಶನದಲ್ಲಿದ್ದ ಚಿತ್ರ ಕಲಾವಿದ ಅರುಣ್ ಕುಮಾರ್ ಅವರ ಮಣ್ಣಿನ ಕಲಾಕೃತಿ ನೋಡುಗರನ್ನು ಸೆಳೆಯಿತು.
‘ಭಾವನೆಗಳ ಅಭಿವ್ತಕ್ತಿ ಬರಹ ರೂಪಕ್ಕೆ ಬರುವ ಮೊದಲು ಚಿತ್ರಗಳ ಮೂಲಕ ವ್ಯಕ್ತಪಡಿಸಲಾಗುತಿತ್ತು. ಈಗ ಸಾಹಿತ್ಯ ಹಾಗೂ ಚಿತ್ರಕಲೆಗಳ ಮಧ್ಯೆ ಸೇತುವೆ ಬೆಸೆಯಲು ಈ ಸಾಹಿತ್ಯ ಉತ್ಸವ ವೇದಿಕೆಯಾಗಿದೆ’ ಎಂದು ಚಿತ್ರಕಲಾವಿದ ಗಣಪತಿ ಅಗ್ನಿಹೋತ್ರಿ ಅಭಿಪ್ರಾಯಪಟ್ಟರು.