ಸೋಮವಾರ, 17 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬುಕ್ ಬ್ರಹ್ಮ ಸಾಹಿತ್ಯ ಉತ್ಸವ: ನೋಂದಣಿ ಪ್ರಾರಂಭ

Published 9 ಜೂನ್ 2024, 4:14 IST
Last Updated 9 ಜೂನ್ 2024, 4:14 IST
ಅಕ್ಷರ ಗಾತ್ರ

ಬೆಂಗಳೂರು: ಬುಕ್ ಬ್ರಹ್ಮ ಸಂಸ್ಥೆಯು ಕೋರಮಂಗಲದ ಸೇಂಟ್ ಜಾನ್ಸ್ ಸಭಾಂಗಣದಲ್ಲಿ ಆಗಸ್ಟ್‌ 9ರಿಂದ 11ರವರೆಗೆ ‘ಬುಕ್ ಬ್ರಹ್ಮ ಸಾಹಿತ್ಯ ಉತ್ಸವ’ ಹಮ್ಮಿಕೊಂಡಿದ್ದು, ಈ ಉತ್ಸವದ ಪ್ರತಿನಿಧಿಗಳ ಉಚಿತ ನೋಂದಣಿ ಪ್ರಾರಂಭವಾಗಿದೆ.

ಭಾರತೀಯ ಭಾಷಾ ಸಾಹಿತ್ಯದ ಮಹತ್ವವನ್ನು ಜಗತ್ತಿಗೆ ಸಾರುವುದು, ಪರಸ್ಪರ ಕೊಡು ಕೊಳ್ಳುವಿಕೆಯ ಮೂಲಕ ಭಾಷೆ ಮತ್ತು ಸಾಹಿತ್ಯವನ್ನು ಇನ್ನಷ್ಟು ಶ್ರೀಮಂತಗೊಳಿಸುವುದು ಹಾಗೂ ದಕ್ಷಿಣ ಭಾರತದ ಎಲ್ಲ ಭಾಷೆಗಳ ಪ್ರಕಾಶಕರನ್ನು ಒಂದೇ ವೇದಿಕೆಗೆ ತರುವುದು ಈ ಉತ್ಸವದ ಉದ್ದೇಶವಾಗಿದೆ.

ದಕ್ಷಿಣದ ಐದು ರಾಜ್ಯಗಳಿಂದ ಸುಮಾರು 450 ಸಾಹಿತಿಗಳು, 100ಕ್ಕೂ ಹೆಚ್ಚು ಪ್ರಕಾಶಕರು ಈ ಸಾಹಿತ್ಯ ಉತ್ಸವದ ಭಾಗವಾಗಲಿದ್ದಾರೆ. ಕನ್ನಡ, ತಮಿಳು, ಮಲಯಾಳಂ, ತೆಲುಗು ಮತ್ತು ಇಂಗ್ಲಿಷ್ ಭಾಷೆಯ 60 ಪುಸ್ತಕ ಮಳಿಗೆಗಳು ಇರಲಿವೆ. ಸಮಾನಾಂತರವಾಗಿ ನಾಲ್ಕು ಸಭಾಂಗಣದಲ್ಲಿ ವಿವಿಧ ಗೋಷ್ಠಿಗಳು ನಡೆಯಲಿವೆ. ಮೂರು ದಿನದಲ್ಲಿ ಒಟ್ಟು ಸುಮಾರು 80 ಗೋಷ್ಠಿಗಳು ನಡೆಯಲಿವೆ ಎಂದು ಸಂಸ್ಥೆ ತಿಳಿಸಿದೆ. ಉತ್ಸವದಲ್ಲಿ ಪ್ರತಿನಿಧಿಗಳಾಗಿ ಭಾಗವಹಿಸಲು ಇಚ್ಛಿಸುವವರು www.bookbrahmalitfest.comಗೆ ಭೇಟಿ ನೀಡಿ ಹೆಸರು ನೋಂದಾಯಿಸಿಕೊಳ್ಳಬಹುದು. ಪ್ರತಿನಿಧಿಗಳಿಗೆ ಸಾಹಿತ್ಯ ಉತ್ಸವ ನಡೆಯುವ ದಿನಗಳಂದು ಕಾರ್ಯಕ್ರಮ ನಡೆಯುವ ಸಭಾಂಗಣದ ಆವರಣದಲ್ಲಿ ಪ್ರವೇಶದ ಉಚಿತ ಪಾಸ್ ನೀಡಲಾಗುವುದು. ಈ ಪಾಸ್ ಹೊಂದಿದವರಿಗೆ ಮಾತ್ರ ಸಾಹಿತ್ಯ ಉತ್ಸವದ ಗೋಷ್ಠಿಗಳಲ್ಲಿ, ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಅವಕಾಶ ಇರುತ್ತದೆ ಎಂದು ಪ್ರಕಟಣೆಯಲ್ಲಿ ಹೇಳಲಾಗಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT