ಶನಿವಾರ, ಸೆಪ್ಟೆಂಬರ್ 19, 2020
27 °C
ಅನುವಾದಿತ ಕೃತಿಗಳ ಬಿಡುಗಡೆ: ವಿಮರ್ಶಕ ಡಾ.ಸಿ.ಎನ್.ರಾಮಚಂದ್ರನ್ ಅಭಿಮತ

‘ಗ್ರಾಮೀಣ ಜನರ ತಲುಪದ ಶ್ರೇಷ್ಠ ಕವನಗಳು’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ‘ಶ್ರೇಷ್ಠ ಲೇಖಕರು ಹಾಗೂ ಕವಿಗಳು ನಮ್ಮಲ್ಲಿ ಸಾಕಷ್ಟು ಇದ್ದಾರೆ. ಆದರೆ, ಪ್ರೊ.ಕೆ.ಎಸ್‌. ನಿಸಾರ್ ಅಹಮದ್ ಸೇರಿದಂತೆ ಕೆಲವರಷ್ಟೇ ತಮ್ಮ ಬರಹಗಳಿಂದ ಗ್ರಾಮೀಣ ಜನರನ್ನು ತಲುಪಿದ್ದಾರೆ’ ಎಂದು ವಿಮರ್ಶಕ ಡಾ.ಸಿ.ಎನ್. ರಾಮಚಂದ್ರನ್ ಹೇಳಿದರು.

ನಗರದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಪ್ರೊ.ಕೆ.ಎಸ್.ನಿಸಾರ್ ಅಹಮದ್ ಅವರ ಆಯ್ದ ಕವಿತೆಗಳ 5 ಅನುವಾದಿತ ಕೃತಿಗಳನ್ನು ಬಿಡುಗಡೆ ಮಾಡಿ ಮಾತನಾಡಿದರು.

‘ನಿಸಾರ್ ಅಹಮದ್ ವಿಶಿಷ್ಟ ಶೈಲಿಯಿಂದ ಸಾಹಿತ್ಯ ಕ್ಷೇತ್ರಕ್ಕೆ ತಮ್ಮದೇ ಕೊಡುಗೆ ನೀಡುತ್ತಿದ್ದಾರೆ. ಅವರ ಕವಿತೆಗಳು ಗ್ರಾಮೀಣ ಜನರನ್ನು ತಲುಪುವಲ್ಲಿ ಯಶಸ್ವಿಯಾಗಿವೆ. ಬರುವ ದಿನಗಳಲ್ಲಿ ಅವರನ್ನು ಕೇಂದ್ರವನ್ನಾಗಿಸಿಕೊಂಡು ಕವಿತೆಗಳ ಆಮೂಲಾಗ್ರ ಚರ್ಚೆ ನಡೆಯಬೇಕು’ ಎಂದು ತಿಳಿಸಿದರು. 

ಉರ್ದು ಕವಿ ಖಲೀಲ್ ಮಾಮೂನ್, ‘ನಿತ್ಯೋತ್ಸವ ಕವಿತೆಯ ಮೂಲಕ ನಿಸಾರ್ ಅವರು ರಾಷ್ಟ್ರದ ಶ್ರೇಷ್ಠ ಕವಿಗಳ ಪಂಕ್ತಿಗೆ ಸೇರಿದ್ದಾರೆ. ‘ಕುರಿಗಳು, ಸಾರ್‌, ಕುರಿಗಳು’ ಕವನ ಅವರ ಪ್ರತಿಭೆ ಅನಾವರಣ ಮಾಡಿದೆ. ಇಂಥ ಕವನಗಳು ಎಲ್ಲ ಭಾಷೆಗಳಿಗೆ ಅನುವಾದವಾಗಬೇಕು’ ಎಂದರು. 

ಲೇಖಕ ಸ.ರಘುನಾಥ, ‘ಕೆ.ಎಸ್.ನ ಅವರ ಕವಿತೆಗಳಲ್ಲಿ ಮಲ್ಲಿಗೆಯ ಕಂಪು ಇದ್ದ ಹಾಗೇ ನಿಸಾರ್ ಅಹಮದ್‌ ಅವರ ಕವಿತೆಗಳಲ್ಲಿ ತಾಳೆ ಹೂ (ಕೇದಿಗೆ) ಗಮವಿದೆ. ಕನ್ನಡ ಸಾಹಿತ್ಯದಲ್ಲಿ ನವ್ಯ ಮತ್ತು ನವೋದಯ ಕಾಲಘಟ್ಟದಲ್ಲಿ ಉದ್ಭವಿಸಿದ್ದ ಜಿದ್ದಾಜಿದ್ದಿ ತೆಲುಗು ಸಾಹಿತ್ಯದಲ್ಲೂ ಉಂಟಾಗಿತ್ತು’ ಎಂದರು.

ಪುಸ್ತಕ: ಕಾಟ್ ಬಿಟ್ವೀನ್ ದಿ ವರ್ಲ್ಡ್‌ ಆಫ್ ಬೈನರೀಸ್ (ದ್ವಂದ್ವಗಳ ಲೋಕದಲ್ಲಿ ದ್ವಂದ್ವಾತೀತ ಶೋಧ)

ಭಾಷೆ: ಇಂಗ್ಲಿಷ್

ಅನುವಾದಕ: ಪ್ರೊ.ಎಂ.ಎಸ್.ರಘುನಾಥ್

ಪುಟಗಳು: 252

ಬೆಲೆ: ₹ 310

 

ಪುಸ್ತಕ: ನಾ ಕವಿತಾಲ್ ಖದರೆ ವೇರು (ನನ್ನ ಕವಿತೆಗಳ ಖದರೇ ಬೇರೆ) 

ಭಾಷೆ: ತೆಲುಗು

ಅನುವಾದಕ: ಸ. ರಘುನಾಥ

ಪುಟಗಳು: 244

ಬೆಲೆ: ₹275

 

ಪುಸ್ತಕ: ಮೇರಾ ಅಂದಾಜ್ ಬಯಾನ್ ಔರ್ (ನನ್ನ ಅಭಿವ್ಯಕ್ತಿಯ ರೀತಿಯೇ ಅನನ್ಯ)

ಭಾಷೆ: ಉರ್ದು

ಅನುವಾದಕ: ಮಾಹೇರ್ ಮನ್ಸೂರ್

ಪುಟಗಳು: 438

ಬೆಲೆ: ₹ 400

 

ಪುಸ್ತಕ: ನಿತ್ಯೋತ್ಸವ ಆ್ಯಂಡ್ ಅದರ್ ನಿಸಾರ್‌’ಸ್‌ ಪೋಯಮ್ಸ್ (ನಿತ್ಯೋತ್ಸವ ಮತ್ತು ನಿಸಾರ್‌ ಅವರ ಇತರ ಕವನಗಳು) 

ಭಾಷೆ: ಹಿಂದಿ

ಅನುವಾದಕಿ: ಬಿ.ವೈ. ಲಲಿತಾಂಬ

ಪುಟಗಳು: 250

ಬೆಲೆ: ₹ 300

 

ಪುಸ್ತಕ: ನಿಸಾರ್ ಕವಿತೆಗಳ್ (ನಿಸಾರ್ ಕವಿತೆಗಳು)

ಭಾಷೆ: ಮಲಯಾಳಿ

ಅನುವಾದಕ: ಪಾರ್ವತಿ ಐತಾಳ್

ಪುಟಗಳು: 172

ಬೆಲೆ: ₹125.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು