ಬೆಂಗಳೂರು: ಬುಕ್ ಬ್ರಹ್ಮ ಸಾಹಿತ್ಯೋತ್ಸವದಲ್ಲಿ ಮೂರು ವೇದಿಕೆಗಳಲ್ಲಿ ಗಹನವಾದ ಚರ್ಚೆಗಳು ಒಂದೆಡೆ ನಡೆದರೆ, ಇನ್ನೊಂದೆಡೆ ಸಾಲು ಸಾಲು ಪುಸ್ತಕ ಮಳಿಗೆಗಳು ಸಾಹಿತ್ಯಾಸಕ್ತರ ಓದಿನ ದಾಹ ತಣಿಸಲು ವಿವಿಧ ಭಾಷೆಗಳ ಪುಸ್ತಕಗಳನ್ನು ಹೊತ್ತು ತಂದಿದ್ದವು.
ಕನ್ನಡ, ತಮಿಳು, ಮಲಯಾಳಂ, ತೆಲುಗು ಮತ್ತು ಇಂಗ್ಲಿಷ್ ಭಾಷೆಯ ಪುಸ್ತಕಗಳನ್ನು ಹೊಂದಿದ್ದ 39 ಮಳಿಗೆಗಳು ಉತ್ಸವದಲ್ಲಿ ಇವೆ. ಕೆಲವು ಮಳಿಗೆಗಳಲ್ಲಿ ಲೇಖಕರೇ ಪುಸ್ತಕ ಮಾರುತ್ತಿದ್ದದ್ದು ವಿಶೇಷ. ಕನ್ನಡದ ಪ್ರಮುಖ ಪ್ರಕಾಶನ ಸಂಸ್ಥೆಗಳ ಮಳಿಗೆಗಳ ಜತೆಗೆ ಶಿಕ್ಷಣ ಸಂಸ್ಥೆಗಳ ಮಳಿಗೆಗಳೂ ಇದ್ದವು.
ಮಳಿಗೆಗಳ ಬಳಿ ಪುಸ್ತಕಗಳ ಬಿಡುಗಡೆಗೆ ಪ್ರತ್ಯೇಕ ವೇದಿಕೆಯನ್ನೂ ಸಿದ್ಧಪಡಿಸಲಾಗಿತ್ತು.