ಮಂಗಳವಾರ, ಜೂನ್ 22, 2021
24 °C

ಬಾಲಕನ ಬಳಿ ₹ 3 ಲಕ್ಷ ಮೌಲ್ಯದ ಮೊಬೈಲ್ ಜಪ್ತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಮೊಬೈಲ್ ಕಳ್ಳತನ ಮಾಡುತ್ತಿದ್ದ ಆರೋಪದಡಿ ಬಾಲಕನೊಬ್ಬನನ್ನು ಎಚ್‌ಎಎಲ್‌ ಠಾಣೆ ಪೊಲೀಸರ ವಶಕ್ಕೆ ಪಡೆದಿದ್ದು, ಆತನಿಂದ ₹ 3 ಲಕ್ಷ ಮೌಲ್ಯದ 26 ಮೊಬೈಲ್‌ಗಳನ್ನು ಜಪ್ತಿ ಮಾಡಲಾಗಿದೆ.

‘ಠಾಣೆ ವ್ಯಾಪ್ತಿಯಲ್ಲಿ ಜೂನ್ 5ರಂದು ವ್ಯಕ್ತಿಯೊಬ್ಬರ ಮೊಬೈಲ್ ಕಳುವಾಗಿತ್ತು. ತನಿಖೆ ಕೈಗೊಂಡಾಗ ಬಾಲಕ ಸಿಕ್ಕಿಬಿದ್ದಿದ್ದಾನೆ. ಈತ ಹಲವೆಡೆ ಕೃತ್ಯ ಎಸಗಿರುವುದಾಗಿ ಗೊತ್ತಾಗಿದೆ’ ಎಂದು ಪೊಲೀಸರು ಹೇಳಿದರು.

‘ಕಳೆದ ಮೂರು ತಿಂಗಳಿನಿಂದ ಬಾಲಕ ಮೊಬೈಲ್ ಕಳವು ಮಾಡುತ್ತಿದ್ದ ಮಾಹಿತಿ ಸಿಕ್ಕಿದೆ. ರೆಡ್ಡಿಪಾಳ್ಯ, ಎಲ್‌.ಬಿ.ಎಸ್ ನಗರ, ತಿಪ್ಪಸಂದ್ರ, ಇಂದಿರಾನಗರ, ಶಿವಾನಂದ ನಗರ, ಅನ್ನಸಂದ್ರ ಪಾಳ್ಯ, ಜೀವನ್‌ಬಿಮಾ ನಗರ, ಬೈಯಪ್ಪನಹಳ್ಳಿ ಹಾಗೂ ಸುತ್ತಮುತ್ತ ಪ್ರದೇಶಗಳಲ್ಲಿ ಬಾಲಕ ಮೊಬೈಲ್ ಕಳವು ಮಾಡಿದ್ದ. ಈ ಎಲ್ಲ ಮೊಬೈಲ್‌ಗಳನ್ನು ಆತನಿಂದ ಜಪ್ತಿ ಮಾಡಲಾಗಿದೆ’ ಎಂದೂ ತಿಳಿಸಿದರು.

ಇದನ್ನೂ ಓದಿ: 

‘ಎಚ್‌ಎಎಲ್ ಠಾಣೆ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಯಾರದ್ದಾದರೂ ಮೊಬೈಲ್‌ಗಳು ಕಳುವಾಗಿದ್ದರೆ ಠಾಣೆಯನ್ನು ಸಂಪರ್ಕಿಸಬಹುದು’ ಎಂದೂ ಪೊಲೀಸರು ಹೇಳಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು