ಭಾನುವಾರ, ಜುಲೈ 25, 2021
21 °C

ವಾಟ್ಸ್‌ಆ್ಯಪ್ ಮೂಲಕವೇ ಸಿಲಿಂಡರ್ ಬುಕ್‌ ಮಾಡಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ವಾಟ್ಸ್‌ಆ್ಯಪ್ ಮೂಲಕವೇ ಅಡುಗೆ ಅನಿಲದ ಸಿಲಿಂಡರ್ ಬುಕ್ಕಿಂಗ್ ಸೌಲಭ್ಯವನ್ನು ಭಾರತ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ (ಬಿಪಿಸಿಎಲ್) ಕಲ್ಪಿಸಿದೆ.

ಬಿಪಿಸಿಎಲ್‌ನ ಸ್ಮಾರ್ಟ್‌ಲೈನ್ ಸಂಖ್ಯೆಗೆ (1800224344) ಕಂಪನಿಯಲ್ಲಿ ನೋಂದಾಯಿಸಿಕೊಂಡಿರುವ ಸಂಖ್ಯೆಯಿಂದ ‘Hi’ ಎಂಬ ಸಂದೇಶ ಕಳುಹಿಸಿದರೆ ಸಿಲಿಂಡರ್ ಬುಕ್ ಆಗಲಿದೆ. ಬುಕ್ಕಿಂಗ್ ಖಚಿತಪಡಿಸುವ ಸಂದೇಶ ಮತ್ತು ಆನ್‌ಲೈನ್‌ನಲ್ಲೇ ಸಿಲಿಂಡರ್ ಮೊತ್ತ ಪಾವತಿಸಲು ಲಿಂಕ್‌ ಬರಲಿದೆ.

‘ಆ ಲಿಂಕ್ ಬಳಸಿಕೊಂಡು ‌ಡೆಬಿಟ್ ಕಾರ್ಡ್‌, ಕ್ರೆಡಿಟ್ ಕಾರ್ಡ್, ಯುಪಿಐ ಮತ್ತು ಇನ್ನಿತರ ಡಿಜಿಟಲ್ ಹಣ ವರ್ಗಾವಣೆ ಆ್ಯಪ್‌ಗಳ ಮೂಲಕ ಪಾವತಿ ಮಾಡಬಹುದು. ನಗದು ವಹಿವಾಟು ತಪ್ಪಿಸಲು ಈ ಕ್ರಮ ಕೈಗೊಳ್ಳಲಾಗಿದೆ’ ಎಂದು ಬಿಪಿಸಿಎಲ್ ಪ್ರಕಟಣೆ ತಿಳಿಸಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು