ಗುರುವಾರ , ಜುಲೈ 29, 2021
20 °C

ಸ್ತನ ಆರೋಗ್ಯ ಪರೀಕ್ಷೆ: ಮನೆ ಬಾಗಿಲಿಗೆ ಸೇವೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೊರೊನಾ ಸೋಂಕು ತಗುಲುವ ಭೀತಿಯಿಂದ ಆಸ್ಪತ್ರೆಗೆ ಹೋಗಲು ಜನರು ಹಿಂಜರಿಯುತ್ತಿದ್ದಾರೆ. ಇಂಥ ಸಮಯದಲ್ಲಿ ಮನೆಯ ಬಾಗಿಲಿಗೆ ಆಸ್ಪತ್ರೆ ಬಂದರೆ ಹೇಗಿರುತ್ತದೆ?

ಮುಂಬೈನಲ್ಲಿ ಇಂಥ ಪ್ರಯೋಗ ಮಾಡಿ ಯಶಸ್ವಿಯಾಗಿರುವ ನೀರಮೈ ಆರೋಗ್ಯ ಮತ್ತು ವೈದ್ಯಕೀಯ ಸೇವಾ ಸಂಸ್ಥೆಯು ಮುಂದಿನ ವಾರದಿಂದ ಬೆಂಗಳೂರಿನಲ್ಲಿಯೂ ಇಂಥದೊಂದು ಸೌಲಭ್ಯ ಒದಗಿಸಲು ಮುಂದಾಗಿದೆ. ಸದ್ಯಕ್ಕೆ ಸ್ತನ ಆರೋಗ್ಯಕ್ಕೆ ಸಂಬಂಧಿಸಿದ ತಪಾಸಣೆಗೆ ಮಾತ್ರ ಈ ಸೇವೆಯನ್ನು ಸೀಮಿತಗೊಳಿಸಿದೆ.    

ಆಸ್ಪತ್ರೆಗೆ ಹೋಗಿ ಪರೀಕ್ಷಿಸಿಕೊಳ್ಳಲು ಹಿಂಜರಿಯುತ್ತಿರುವ ಜನರು ವೆಬ್‌ಸೈಟ್ ಅಥವಾ ಇ–ಮೇಲ್ ಮೂಲಕ ಆಸ್ಪತ್ರೆಯನ್ನು ಸಂಪರ್ಕಿಸಿ, ಅಪಾಯಿಂಟ್‌ಮೆಂಟ್ ಪಡೆದರೆ ಸಾಕು. ತಜ್ಞ ವೈದ್ಯರು ಮತ್ತು ತಂತ್ರಜ್ಞರ ನಿಮ್ಮ ಮನೆಗೆ ಬಂದು ಚಿಕಿತ್ಸೆ ನೀಡುತ್ತಾರೆ. ಈ ಆರೋಗ್ಯ ಸೇವೆಗೆ ನಿಗದಿತ ಶುಲ್ಕವಿದೆ. (2,500 ರೂಪಾಯಿ)

ಈ ಸೇವೆ ಕೊರೊನಾ ಸಮಯದಲ್ಲಿ ಮಾತ್ರವಲ್ಲ, ಕಾಯಂ ಆಗಿ ಲಭ್ಯವಿರಲಿದೆ. ಮುಂದಿನ ದಿನಗಳಲ್ಲಿ ಜನರ ಪ್ರತಿಕ್ರಿಯೆ ಆಧರಿಸಿ ಸೇವೆಯನ್ನು ವಿಸ್ತರಿಸುವ ಯೋಚನೆ ಈ ಸಂಸ್ಥೆಗಿದೆ.

ಈ ಕುರಿತು ಮಾಹಿತಿ ನೀಡಿರುವ ನೀರಮೈ ಸಂಸ್ಥಾಪಕಿ ಮತ್ತು ಸಿಇಒ ಡಾ. ಗೀತಾ ಮಂಜುನಾಥ್, ‘ಇತ್ತೀಚಿನ ದಿನಗಳಲ್ಲಿ ಸ್ತನ ಕ್ಯಾನ್ಸರ್ ಹೆಚ್ಚಾಗುತ್ತಿರುವ ಕಾರಣ, ಮಹಿಳೆಯರು ನಿಯಮಿತವಾಗಿ ಸ್ತನ ಆರೋಗ್ಯ ಪರೀಕ್ಷೆ ಮಾಡಿಸಿಕೊಳ್ಳುತ್ತಾರೆ. ಆದರೆ ಈ ಸಮಯದಲ್ಲಿ ಆಸ್ಪತ್ರೆಗೆ ಹೋಗಿ ಪರೀಕ್ಷೆ ಮಾಡಿಸಿಕೊಳ್ಳುವುದಕ್ಕೆ ಭಯಪಡುತ್ತಾರೆ. ಇಂಥ ಸಂದರ್ಭದಲ್ಲಿ ನಮ್ಮ ಸಂಸ್ಥೆಯ ತಜ್ಞರು ಮನೆಬಾಗಿಲಿಗೆ ತೆರಳಿ, ವ್ಯಕ್ತಿಯನ್ನು ಸ್ಪರ್ಶಿಸದೆ ಡಿಜಿಟಲ್‌ ತಂತ್ರಜ್ಞಾನದ ನೆರವಿನಿಂದ ತಪಾಸಣೆ ನಡೆಸುತ್ತಾರೆ. ಪರೀಕ್ಷೆ ವೇಳೆ ಎಲ್ಲ ಅಗತ್ಯ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಲಾಗುತ್ತದೆ.ಈ ಹೊಸ ರೂಪದ ವೈದ್ಯಕೀಯ ಸೇವೆಯಿಂದ, ಮಹಿಳೆಯರಿಗೆ ತುಂಬಾ ಅನುಕೂಲವಾಗಲಿದೆ‘ ಎಂದು ವಿವರಿಸಿದರು. 

ಮೆಮೊಗ್ರಫಿ, ಫೈನ್‌ನೀಡಲ್ ಟೆಸ್ಟ್‌, ರಕ್ತ ತಪಾಸಣೆ ಸೇರಿದಂತೆ ಸ್ತನ ಕ್ಯಾನ್ಸರ್ಗೆ ಸಂಬಂಧಿಸಿದ ಎಲ್ಲ ತಪಾಸಣೆ ಮಾಡಲಾಗುವುದು. ಸ್ಕ್ರೀನಿಂಗ್ ನಂತರ 24 ಗಂಟೆ ಒಳಗೆ ರೇಡಿಯಾಲಜಿಸ್ಟ್ ಮತ್ತು ಇತರ ತಜ್ಞರು ನೀಡಿದ ವರದಿಯನ್ನು ಇ–ಮೇಲ್‌ಗೆ ವರದಿ ಕಳಿಸಲಾಗುತ್ತದೆ ಎಂದು ತಿಳಿಸಿದರು.

ಅಪಾಯಿಂಟ್‌ಮೆಂಟ್‌ ಬುಕ್ ಮಾಡಲು ಮತ್ತು ಹೆಚ್ಚಿನ ವಿವರಗಳಿಗೆ ಆಸ್ಪತ್ರೆಯ ಇ–ಮೇಲ್ ವಿಳಾಸ:‌ contact@niramai.com https://www.niramai.com/ book- appointment/

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು