ಶನಿವಾರ, ಮೇ 8, 2021
19 °C

ಜಲಮಂಡಳಿ ಸಕಾಲ ಸಪ್ತಾಹ 30ರಿಂದ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಜಲಮಂಡಳಿಯು ಇದೇ 30ರಿಂದ ಡಿ.5ರವರೆಗೆ ಸಕಾಲ ಸಪ್ತಾಹವನ್ನು ಹಮ್ಮಿಕೊಂಡಿದೆ. ಸಕಾಲ ಯೋಜನೆಯಡಿ ಮಂಡಳಿಯು 9 ಸೇವೆಗಳನ್ನು ನೀಡುತ್ತಿದ್ದು, ಇವುಗಳ ವಿವರವನ್ನು ಆಯಾ ಪ್ರದೇಶದ ನಿರ್ವಹಣಾ ವಲಯಗಳ ಕಚೇರಿಯಲ್ಲಿ ನೀಡಲಾಗುತ್ತದೆ.

ಸಕಾಲ ಸೇವೆಗಳು: ಅಪಾರ್ಟ್‌ಮೆಂಟ್‌ ಸಮುಚ್ಚಯಗಳನ್ನು ಹೊರತುಪಡಿಸಿ, ಹೊಸ ಸಂಪರ್ಕವನ್ನು ಅಥವಾ ಹೆಚ್ಚುವರಿ ಸಂಪರ್ಕವನ್ನು ಒದಗಿಸಲು ಅನುಮತಿ, ಬಹುಮಹಡಿ ಕಟ್ಟಡಗಳಿಗಾಗಿ ನೀರಿನ ಸಂಪರ್ಕ ಮತ್ತು ಒಳಚರಂಡಿ ವ್ಯವಸ್ಥೆ ಕಲ್ಪಿಸುವುದಕ್ಕೆ ಅನುಮತಿ, ಕಟ್ಟಿಕೊಂಡ ಒಳಚರಂಡಿ ಪೈಪ್‌ಗಳು, ಒಡೆದುಹೋದ ಪೈಪ್‌ಗಳ ದುರಸ್ತಿಗೆ ಕ್ರಮ, ನೀರು ಸರಬರಾಜಿಗೆ ಸಂಬಂಧಿಸಿದ ದೂರುಗಳು, ದೋಷಪೂರಿತ ಮೀಟರ್ ಪರಿಶೀಲನೆ ಹಾಗೂ ಬದಲಾವಣೆಗೆ ಸಂಬಂಧಿಸಿದ ಸೇವೆಗಳನ್ನು ಈ ಸಪ್ತಾಹದಲ್ಲಿ ಒದಗಿಸಲಾಗುವುದು ಎಂದು ಮಂಡಳಿ ತಿಳಿಸಿದೆ. 

ನಿರ್ವಹಣಾ ವಲಯದ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್‌ ಕಚೇರಿಯ ವಿಳಾಸವು ಮಂಡಳಿಯ ಅಧಿಕೃತ ವೆಬ್‌ಸೈಟ್ www.bwssb.gov.inನಲ್ಲಿ ಲಭ್ಯ ಇದೆ.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.