ಬೆಂಗಳೂರು: ಸಿಬ್ಬಂದಿ ನೇಮಕಾತಿ ಸಂಖ್ಯೆ ಹೆಚ್ಚಿಸುವ ಮೂಲಕ ನೌಕರರ ಮೇಲಿನ ಒತ್ತಡ ತಗ್ಗಿಸಬೇಕು, ವರ್ಗಾವಣೆಗೆ ಪಾರದರ್ಶಕ ನೀತಿ ಜಾರಿಗೊಳಿಸಬೇಕು ಎನ್ನುವುದು ಸೇರಿದಂತೆ ಹಲವು ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಕೆನರಾ ಬ್ಯಾಂಕ್ ನೌಕರರ ಒಕ್ಕೂಟದಿಂದ ಸ್ವಾತಂತ್ರ್ಯ ಉದ್ಯಾನದಲ್ಲಿ ಮಂಗಳವಾರ ಪ್ರತಿಭಟನೆ ನಡೆಸಲಾಯಿತು.

‘ಕೆನರಾ ಬ್ಯಾಂಕ್ನ ವಹಿವಾಟು ಏರಿಕೆಯಾಗಿ ಸೆಪ್ಟಂಬರ್ ಹೊತ್ತಿಗೆ ₹26.78 ಲಕ್ಷ ಕೋಟಿಗೆ ತಲುಪಿದೆ. ಲಾಭದ ಪ್ರಮಾಣವೇ ₹8,588 ಕೋಟಿಯಷ್ಟಿದೆ. ಆದರೆ, ನೌಕರರ ಪ್ರಮಾಣ ಮೂರು ವರ್ಷಗಳಲ್ಲಿ 88,213 ರಿಂದ 81,260ಕ್ಕೆ ಇಳಿದಿದೆ. ಸಿಬ್ಬಂದಿ ಸಂಖ್ಯೆ ಕಡಿಮೆಯಾಗಿರುವುದರಿಂದ ಪ್ರತಿ ಶಾಖೆಯಲ್ಲೂ ಒತ್ತಡ ಹೆಚ್ಚಿದೆ’ ಎಂದು ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಎನ್.ಸುರೇಶ್ಬಾಬು ಅಸಮಾಧಾನ ವ್ಯಕ್ತಪಡಿಸಿದರು.

‘ಎಲ್ಲಾ ಶ್ರೇಣಿಯ ಹುದ್ದೆಗಳಲ್ಲೂ ನೇಮಕ ಪ್ರಕ್ರಿಯೆ ನಡೆಸಬೇಕು. ಪಾರದರ್ಶಕ ವರ್ಗಾವಣೆ ನೀತಿ ಜಾರಿಗೊಳಿಸಬೇಕು. ನೌಕರರ ಫೀಡ್ಬ್ಯಾಕ್ ವ್ಯವಸ್ಥೆ ಹಿಂದಕ್ಕೆ ಪಡೆಯಬೇಕು. ಎಲ್ಲಾ ಶಾಖೆಗಳಿಗೂ ಸೂಕ್ತ ಮೂಲಸೌಕರ್ಯ ಒದಗಿಸಬೇಕು. ದಿನಗೂಲಿಯಾಗಿ ಕಾರ್ಯನಿರ್ವಹಿಸುತ್ತಿರುವವರ ಸೇವೆ ಕಾಯಂ ಮಾಡಿ ನ್ಯಾಯಸಮ್ಮತ ವೇತನ ನಿಗದಿ ಮಾಡಬೇಕು. ಕೆವೈಸಿ ಮಾಹಿತಿ ಉನ್ನತೀಕರಿಸಲು ನೌಕರ ಸ್ನೇಹಿ ಸಾಫ್ಟ್ವೇರ್ ರೂಪಿಸಬೇಕು’ ಎಂದು ಆಗ್ರಹಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.