‘ಆಡಳಿತಾತ್ಮಕ ಕಾರಣ ಏನು? ಅದಕ್ಕೂ ಬಾಡಿಗೆದಾರರಿಗೂ ಯಾವ ಸಂಬಂಧ ಎಂಬುದನ್ನು ಸ್ಪಷ್ಟಪಡಿಸದೇ, ಬಾಡಿಗೆದಾರರ ಅಭಿಪ್ರಾಯ ಪಡೆಯದೇ ನೋಟಿಸ್ ನೀಡಲಾಗಿದೆ. ಒಮ್ಮೆಲೇ ₹ 39 ಸಾವಿರ ಕಟ್ಟಲು ಸಾಧ್ಯವಿಲ್ಲ. ಭದ್ರತಾ ಠೇವಣಿಯನ್ನು ಇಂಥ ಕಾರಣಗಳಿಗೆ ಹೊಂದಾಣಿಕೆ ಮಾಡಲು ಕಾನೂನಿನಲ್ಲಿ ಅವಕಾಶವಿಲ್ಲ’ ಎಂದು ಬಾಡಿಗೆದಾರ ಪಿ.ಸಿ. ಅಜಿತ್ ಗೌಡ ಈ ನೋಟಿಸ್‌ಗೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ.