ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೇಮಕಾತಿ ತಡೆ ಖಂಡಿಸಿ ಅಭ್ಯರ್ಥಿಗಳ ಪ್ರತಿಭಟನೆ

Last Updated 23 ನವೆಂಬರ್ 2020, 20:48 IST
ಅಕ್ಷರ ಗಾತ್ರ

ಬೆಂಗಳೂರು: ಕೋವಿಡ್‍ನಿಂದ ಆರ್ಥಿಕ ಸಂಕಷ್ಟದ ನೆಪವೊಡ್ಡಿ ಸ್ಥಗಿತಗೊಳಿಸಿದ್ದ ಸರ್ಕಾರಿ ಇಲಾಖೆಗಳ ನೇಮಕಾತಿ ಪ್ರಕ್ರಿಯೆಯನ್ನು ಕೂಡಲೇ ಪೂರ್ಣಗೊಳಿಸಬೇಕು ಎಂದು ಒತ್ತಾಯಿಸಿ ಎಸ್‍ಡಿಎ ಮತ್ತು ಎಫ್‍ಡಿಎಹುದ್ದೆಗಳಿಗೆ ಆಯ್ಕೆಯಾಗಿರುವ ಅಭ್ಯರ್ಥಿಗಳು ಮೌರ್ಯ ವೃತ್ತದಲ್ಲಿ ಸೋಮವಾರ ಪ್ರತಿಭಟನೆ ನಡೆಸಿದರು.

'ಕರ್ನಾಟಕ‌ ಲೋಕಸೇವಾ ಆಯೋಗ (ಕೆಪಿಎಸ್‌ಸಿ)ಒಟ್ಟು 1,812 ಎಸ್‍ಡಿಎ ಹಾಗೂ ಎಫ್‍ಡಿಎ ಹುದ್ದೆಗಳಿಗೆ 2017ರಲ್ಲಿ ಅಧಿಸೂಚನೆ ಹೊರಡಿಸಿತ್ತು. ಈ ಹುದ್ದೆಗಳಿಗೆ 2018ರಲ್ಲಿ ಪರೀಕ್ಷೆ ನಡೆಯಿತು. ಈ ಜನವರಿಯಲ್ಲಿ ಅಭ್ಯರ್ಥಿಗಳ ತಾತ್ಕಾಲಿಕ ಆಯ್ಕೆ ಪಟ್ಟಿಯನ್ನೂ ಕೆಪಿಎಸ್‍ಸಿ ಬಿಡುಗಡೆ ಮಾಡಿತು. ಜುಲೈನಲ್ಲಿ ಅಂತಿಮ ಆಯ್ಕೆ ಪಟ್ಟಿ ಮತ್ತು ಅಭ್ಯರ್ಥಿಗಳ ಸ್ಥಳ ನಿಯೋಜನೆಯೂ ಆಗಿದೆ. ಆದರೆ, ಕೋವಿಡ್ ನೆಪ ಹೇಳಿ ನೇಮಕಾತಿಯನ್ನು ಮುಂದಿನ ವರ್ಷದವರೆಗೆ ಸರ್ಕಾರ ತಡೆಹಿಡಿದಿದೆ' ಎಂದು ನೊಂದ ಅಭ್ಯರ್ಥಿ ಕಿಶೋರ್ ಅಳಲು ತೋಡಿಕೊಂಡರು.

'ಸರ್ಕಾರದ ಆದೇಶದ ನಂತರವೂ ಕೆಲ ಇಲಾಖೆಗಳು ಅಭ್ಯರ್ಥಿಗಳ ನೇಮಕಾತಿ ಪ್ರಕ್ರಿಯೆ ಪೂರ್ಣಗೊಳಿಸಿ ಕರ್ತವ್ಯಕ್ಕೆ ನಿಯೋಜಿಸಿಕೊಂಡಿವೆ. ಅಭ್ಯರ್ಥಿಗಳಲ್ಲಿ ಈ ತಾರತಮ್ಯ ಮಾಡಿರುವುದಾದರೂ ಏಕೆ?' ಎಂದು ಮತ್ತೋರ್ವ ಅಭ್ಯರ್ಥಿ ಉಮಾ ಪ್ರಶ್ನಿಸಿದರು.

'ನೇಮಕಾತಿ ಮಾಡಿಕೊಳ್ಳುವಂತೆ ಇಲಾಖೆಗಳಿಗೆ ಸೂಚನೆ ನೀಡಬೇಕು' ಎಂದು ಅಭ್ಯರ್ಥಿ ದುರ್ಗೇಶ್ ಒತ್ತಾಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT