ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೆಣ್ಣೂರಿನಲ್ಲಿ ‘ಕಾಸಾಗ್ರ್ಯಾಂಡ್‌’

Last Updated 9 ಅಕ್ಟೋಬರ್ 2020, 19:48 IST
ಅಕ್ಷರ ಗಾತ್ರ

ಬೆಂಗಳೂರು: ನಗರದ ಹೆಣ್ಣೂರು ಮುಖ್ಯರಸ್ತೆಯಲ್ಲಿಕಾಸಾಗ್ರ್ಯಾಂಡ್‌ ಬಿಲ್ಡರ್‌ ಕಂಪನಿಯ ‘ಕಾಸಾಗ್ರ್ಯಾಂಡ್ ಬೊಲೆವಾರ್ಡ್‌’ ತಲೆ ಎತ್ತಿದೆ. ಮಾನ್ಯತಾ ಟೆಕ್‌ ಪಾರ್ಕ್‌ನಿಂದ 10 ನಿಮಿಷಗಳ ಪ್ರಯಾಣದ ಅಂತರದಲ್ಲಿರುವ ಈ ಅಪಾರ್ಟ್‌ಮೆಂಟ್‌ ಸಮುಚ್ಚಯವನ್ನು 7.67 ಎಕರೆ ಪ್ರದೇಶದಲ್ಲಿ ನಿರ್ಮಿಸಲಾಗಿದೆ.

ಮನೆಗಳನ್ನು ಯೋಗ್ಯದರದಲ್ಲಿ ಮಾರಾಟ ಮಾಡಲು ಕಂಪನಿ ಮುಂದಾಗಿದ್ದು, ಚದರ ಅಡಿಗೆ ₹4,399 ದರ ನಿಗದಿ ಮಾಡಲಾಗಿದೆ. 75ಕ್ಕೂ ಹೆಚ್ಚು ಮನೆಗಳು ಈ ಅಪಾರ್ಟ್‌ಮೆಂಟ್‌ನಲ್ಲಿವೆ. ನಗರದಲ್ಲಿ ಕಂಪನಿಯು ಕೈಗೆತ್ತಿಕೊಂಡಿರುವ ಐದನೇ ಯೋಜನೆ ಇದು. ಒಂದರಿಂದ ನಾಲ್ಕು ಕೋಣೆಗಳಿರುವ ಐಷಾರಾಮಿ ಮನೆಗಳು ಈ ಸಮುಚ್ಚಯದಲ್ಲಿವೆ.

ಈಜುಕೊಳ, ಕ್ಲಬ್‌ಹೌಸ್, ವ್ಯಾಯಾಮ ಶಾಲೆ, ಆಟದ ಮೈದಾನ, ಸೈಕಲ್‌ ಪಥ ಸೇರಿದಂತೆ ಎಲ್ಲ ವ್ಯವಸ್ಥೆ ಇದ್ದು, ಡಿಜಿಟಲ್‌ ಡೋರ್ ಲಾಕ್‌ ವ್ಯವಸ್ಥೆಯ ಇದೆ. ದಿನದ 24 ಗಂಟೆ ಭದ್ರತಾ ಸಿಬ್ಬಂದಿ ಕಾರ್ಯನಿರ್ವಹಿಸಲಿದ್ದಾರೆ ಎಂದು ಕಂಪನಿಯ ನಿರ್ದೇಶಕ ಸಿ.ಜಿ. ಸತೀಶ್‌ ಹೇಳಿದ್ದಾರೆ.

‘ವಿಟಮಿನ್‌ ಸಿ ಶವರ್, ಮಾಸ್ಟರ್ ಬೆಡ್‌ ರೂಮ್‌ಗಳಲ್ಲಿ ಗಾಳಿ ಶುದ್ಧೀಕರಣ ವ್ಯವಸ್ಥೆ ಸೇರಿದಂತೆ ಆರೋಗ್ಯ ರಕ್ಷಣೆಗೆ ಹೆಚ್ಚು ಒತ್ತು ಕೊಡುವ ರೀತಿಯಲ್ಲಿ ಅಪಾರ್ಟ್‌ಮೆಂಟ್ ಸಮುಚ್ಚಯ ನಿರ್ಮಿಸಲಾಗಿದೆ’ ಎಂದು ಅವರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT