ಬೆಂಗಳೂರು: ‘ಸ್ವಾತಂತ್ರ್ಯಪೂರ್ವದಲ್ಲಿ ಜಾತಿ ಎನ್ನುವುದು ಕೇವಲ ನಂಬಿಕೆಯಾಗಿತ್ತು. ಆದರೆ, ಈಗ ಅದು ಕುತಂತ್ರದ ರೂಪವನ್ನು ತಾಳಿ, ದೃಢವಾಗಿ ಬೇರೂರಿದೆ’ ಎಂದು ಸಾಹಿತಿ ಡಾ.ಕೆ. ಮರುಳಸಿದ್ದಪ್ಪ ತಿಳಿಸಿದರು.

ಇದನ್ನು ಓದಿ:ಸಂಪಾದಕರ ಮಾತು | ಪ್ರಜಾವಾಣಿ ಆಂಡ್ರಾಯ್ಡ್ ಮತ್ತು ಐಒಎಸ್ ಆ್ಯಪ್ ಲೋಕಾರ್ಪಣೆ

ಜಿ.ಎನ್. ನಾಗರಾಜ್ ಅವರ ‘ಜಾತಿ ಬಂತು ಹೇಗೆ?’ ಪುಸ್ತಕದ ಕುರಿತು ಬಹುರೂಪಿ ಪ್ರಕಾಶನವು ಗುರುವಾರ ಆಯೋಜಿಸಿದ ಸಂವಾದದಲ್ಲಿ ಮಾತನಾಡಿದ ಅವರು, ‘ನಮ್ಮ ಚರಿತ್ರೆಯ ಪುಸ್ತಕಗಳು ರಾಜಪ್ರಭುತ್ವವನ್ನು ವಿವರಿಸುತ್ತವೆ. ಅವುಗಳಲ್ಲಿ ಈ ನಾಡಿನ ಸಾಮಾಜಿಕ ಚರಿತ್ರೆಯು ಗೌಣವಾಗಿವೆ. ಇತ್ತೀಚಿನ ದಿನಗಳಲ್ಲಿ ಜನರಿಗೆ ಸಾಮಾಜಿಕ ಚರಿತ್ರೆಯ ಬಗ್ಗೆ ತಿಳಿದುಕೊಳ್ಳಬೇಕೆಂಬ ಆಸಕ್ತಿ ಹೆಚ್ಚುತ್ತಿದೆ. ಸಾಮಾನ್ಯರ ನಂಬಿಕೆ ಪ್ರಕಾರ ಜಾತಿ ಅನಾದಿ ಕಾಲದಿಂದಲೂ ಇದೆ. ಶೇ 99 ರಷ್ಟು ಮಂದಿ ಜಾತಿಯನ್ನು ದೇವರೇ ಸೃಷ್ಟಿಸಿದ್ದಾನೆ ಎಂದುಕೊಂಡಿದ್ದಾರೆ. ಆದರೆ, ವಾಸ್ತವದಲ್ಲಿ ಜಾತಿಯು ಯಾವುದೋ ಒಂದು ಕಾಲಘಟ್ಟದಿಂದ ಬಂದಿದೆ’ ಎಂದರು.

ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳುವ ಲಿಂಕ್:ಆಂಡ್ರಾಯ್ಡ್ ಆ್ಯಪ್|ಐಒಎಸ್ ಆ್ಯಪ್

‘ದೇಶದಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆ ಸಂಪೂರ್ಣ ವಿಫಲವಾಗಿದೆ. ರಾಜಕಾರಣ ಕೂಡ ಧರ್ಮ ಮತ್ತು ಜಾತಿ ವ್ಯವಸ್ಥೆಯ ಆಧಾರದ ಮೇಲೆಯೆ ನಡೆಯುತ್ತಿದೆ’ ಎಂದು ಬೇಸರ ವ್ಯಕ್ತಪಡಿಸಿದರು.

ಕವಿ ಮೂಡ್ನಾಕೂಡು ಚಿನ್ನಸ್ವಾಮಿ, ‘ಈ ಹಿಂದೆ ಕ್ಷತ್ರಿಯರು ಮಾತ್ರ ಯುದ್ಧ ಮಾಡಬೇಕೆಂಬ ನಿಯಮ ಮಾಡಲಾಯಿತು. ಇದರಿಂದ ಉಳಿದ ವರ್ಗದವರನ್ನು ದುರ್ಬಲಗೊಳಿಸಲಾಯಿತು. ಜಾತಿ ವ್ಯವಸ್ಥೆಯಿಂದ ದೇಶ ಮುಂದಕ್ಕೆ ಹೋಗಲು ಸಾಧ್ಯವಾಗುತ್ತಿಲ್ಲ. ಸಾಮಾಜಿಕ, ಸಾಂಸ್ಕೃತಿಕ ಮತ್ತು ಧಾರ್ಮಿಕ ಕಾರ್ಯಚಟುವಟಿಕೆಗಳಿಗೆ ಜಾತಿಯ ಸಂವಿಧಾನ ರೂಪಿಸಿಕೊಳ್ಳಲಾಗಿದೆ. ಇದರಿಂದಾಗಿ ಅಂಬೇಡ್ಕರ್ ಅವರು ನೀಡಿದ ಸಂವಿಧಾನದ ಆಶಯ ಪೂರ್ಣಗೊಂಡಿಲ್ಲ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.