ಬೆಂಗಳೂರು: ಕಾವೇರಿ ನೀರಿನ ಹೊಸ ಸಂಪರ್ಕದ ‘ಪ್ರೊರೇಟಾ’ ಶುಲ್ಕವನ್ನು ಸಮಾನ ಕಂತುಗಳಲ್ಲಿ (ಇಎಂಐ) ಪಾವತಿಸಲು ಬೆಂಗಳೂರು ಜಲಮಂಡಳಿ ಯೋಜನೆ ರೂಪಿಸಿದ್ದು, ಏಪ್ರಿಲ್ 15ರ ನಂತರ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಈ ಯೋಜನೆಗೆ ಚಾಲನೆ ನೀಡಲಿದ್ದಾರೆ ಎಂದು ಮಂಡಳಿ ಅಧ್ಯಕ್ಷ ರಾಮ್ಪ್ರಸಾತ್ ಮನೋಹರ್ ತಿಳಿಸಿದ್ದಾರೆ.

‘ಯೋಜನೆ ಉದ್ಘಾಟನೆಯಾದ ನಂತರ ಎರಡು ತಿಂಗಳವರೆ ಇದು ಚಾಲ್ತಿಯಲ್ಲಿರಲಿದೆ. ಕಾವೇರಿ ನೀರಿನ ಸಂಪರ್ಕ ಪಡೆಯದವರು ಈ ಅವಧಿಯೊಳಗೆ ಈ ಸೌಲಭ್ಯದ ಸದುಪಯೋಗ ಪಡೆದುಕೊಳ್ಳಬೇಕು’ ಎಂದು ಅವರು ತಿಳಿಸಿದ್ದಾರೆ.

ಬೆಂಗಳೂರು ನಗರದ ಎಲ್ಲ ನಾಗರಿಕರಿಗೂ ಶುದ್ದ ಹಾಗೂ ಬಿಐಎಸ್ ಪ್ರಾಮಾಣೀಕೃತ ಕುಡಿಯುವ ನೀರು ಒದಗಿಸುವ ಉದ್ದೇಶದಿಂದ ಈ ಯೋಜನೆಯನ್ನು ಅನುಷ್ಠಾನಗೊಳಿಸಲಾಗುತ್ತಿದೆ ಎಂದು ಅವರು ಪ್ರಕಟಣೆಯಲ್ಲಿ ಮಾಹಿತಿ ನೀಡಿದ್ದಾರೆ.

ಕಾವೇರಿ ನೀರಿನ ಹೊಸ ಸಂಪರ್ಕ ಪಡೆಯಲು ಒಂದೇ ಬಾರಿಗೆ ‘ಪ್ರೊರೇಟಾ ಶುಲ್ಕ’ ಪಾವತಿಸಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಇಎಂಐ ಸೌಲಭ್ಯ ನೀಡಬೇಕೆಂದು ಅಪಾರ್ಟ್ಮೆಂಟ್ ಕ್ಷೇಮಾಭಿವೃದ್ದಿ ಸಂಘಗಳು, ಕಟ್ಟಡಗಳ ಮಾಲೀಕರು ಮನವಿ ಮಾಡಿದ್ದರು. ಈ ಕಾರಣದಿಂದ 12 ತಿಂಗಳ ಸಮಾನ ಕಂತುಗಳಲ್ಲಿ ಶುಲ್ಕ ಪಾವತಿಸಿ ನೀರಿನ ಸಂಪರ್ಕ ಪಡೆದುಕೊಳ್ಳುವ ಯೋಜನೆಯನ್ನು ಜಾರಿಗೊಳಿಸಲಾಗುತ್ತಿದೆ ಎಂದು ವಿವರಿಸಿದ್ದಾರೆ.

‘ಇಎಂಐ’ಗೆ ಷರತ್ತುಗಳು

ಡಿಮ್ಯಾಂಡ್ ನೋಟಿಸ್ (ಅನ್ವಯಿಸಿದಲ್ಲಿ ಪ್ರೋರೇಟಾ ಶುಲ್ಕ ಮೀಟರ್ ಶುಲ್ಕ ಪರಿವೀಕ್ಷಣಾ ಶುಲ್ಕ ಜಿಬಿ ವಾಸ್ಟ್ ಬಿಸಿಸಿ ಶುಲ್ಕಗಳು ಹಾಗೂ ಲೈನ್ ವೆಚ್ಚ ಸೇರಿದ) ತಲುಪಿದ ನಂತರ ಒಟ್ಟು ಶುಲ್ಕದಲ್ಲಿ ಶೇ 20ರಷ್ಟು ಮೊತ್ತವನ್ನು ಮೊದಲ ಕಂತಾಗಿ ಪಾವತಿಸಬೇಕು.

ಉಳಿದ ಶೇ 80ರಷ್ಟು ಶುಲ್ಕವನ್ನು 12 ತಿಂಗಳ ಸಮಾನ ಕಂತುಗಳಲ್ಲಿ ಪಾವತಿಸಬೇಕು.

ಅಪಾರ್ಟ್ಮೆಂಟ್ ಕ್ಷೇಮಾಭಿವೃದ್ಧಿ ಸಂಘಗಳು ಹಾಗೂ ಮನೆ/ಕಟ್ಟಡ ಮಾಲೀಕರಿಗೆ ಮಾತ್ರ ಈ ಇಎಂಐ ಸೌಲಭ್ಯವಿರುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.