ಮಂಗಳವಾರ, ಆಗಸ್ಟ್ 16, 2022
20 °C

ಬೆಂಗಳೂರು: ನಿವೃತ್ತ ನೌಕರರ ಕ್ಲಬ್‌ ಮೇಲೆ ಸಿಸಿಬಿ ದಾಳಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ರಾಜ್ಯ ನಿವೃತ್ತ ನೌಕರರ ಮತ್ತು ಗೆಳೆಯರ ಸಾಂಸ್ಕೃತಿಕ ಕ್ರೀಡೆ ಹಾಗೂ ಮನೋರಂಜನಾ ಕ್ಲಬ್ ಮೇಲೆ ಸಿಸಿಬಿ ಪೊಲೀಸರು ದಾಳಿ ಮಾಡಿದ್ದು, ಅಕ್ರಮ ಜೂಜಾಟ ಆರೋಪದಡಿ 22 ಮಂದಿಯನ್ನು ಬಂಧಿಸಿದ್ದಾರೆ.

‘ಗೋವಿಂದರಾಜನಗರ ಠಾಣೆ ವ್ಯಾಪ್ತಿಯ ಪಟ್ಟೇಗಾರಪಾಳ್ಯದ ಮುಖ್ಯರಸ್ತೆಯಲ್ಲಿರುವ ಕ್ಲಬ್‌ನಲ್ಲಿ ಸದಸ್ಯರಲ್ಲದವರು ಜೂಜು ಆಡುತ್ತಿದ್ದ ಮಾಹಿತಿ ಬಂದಿತ್ತು. ಬುಧವಾರ ದಾಳಿ ಮಾಡಿ, ನಾಲ್ವರು ಕೆಲಸಗಾರರು ಸೇರಿ 22 ಮಂದಿಯನ್ನು ಬಂಧಿಸಲಾಗಿದೆ’ ಎಂದು ಸಿಸಿಬಿ ಪೊಲೀಸರು ಹೇಳಿದರು.

‘ಪ್ರತಿ ನಿತ್ಯವೂ ಕ್ಲಬ್‌ಗೆ ಬರುತ್ತಿದ್ದ ಆರೋಪಿಗಳು ಹಣ ಕಟ್ಟಿ ಜೂಜು ಆಡುತ್ತಿದ್ದರು. ಇದಕ್ಕೆ ಕೆಲಸಗಾರರು ಸಹಕಾರ ನೀಡುತ್ತಿದ್ದರು. ದಾಳಿ ವೇಳೆ ಬಂಧಿತರಿಂದ ₹ 1.05 ಲಕ್ಷ ನಗದು ಜಪ್ತಿ ಮಾಡಲಾಗಿದೆ’ ಎಂದೂ ತಿಳಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.