ಬುಧವಾರ, ಜನವರಿ 22, 2020
25 °C

ರೇಸ್ ಕೋರ್ಸ್ ಟರ್ಫ್ ಕ್ಲಬ್ ಮೇಲೆ‌ ಸಿಸಿಬಿ ದಾಳಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ನಗರದ ರೇಸ್ ಕೋರ್ಸ್ ಟರ್ಫ್ ಕ್ಲಬ್ ಮೇಲೆ  ಸಿಸಿಬಿ ಪೊಲೀಸರು ದಾಳಿ ಮಾಡಿದ್ದಾರೆ. 
ಡಿಸಿಪಿ ರವಿಕುಮಾರ್ ನೇತೃತ್ವದಲ್ಲಿ ಈ ದಾಳಿ ನಡೆದಿದೆ.

ಕುದುರೆ ಬಿದ್ದ ಪ್ರಕರಣದ ತನಿಖೆ ಕೈಗೊಂಡಿದ್ದ ಪೊಲೀಸರು. ತನಿಖೆಗೆ ಸಂಬಂಧಪಟ್ಟಂತೆ ಮಹತ್ವ ದಾಖಲೆಗಳನ್ನು ಕಲೆ ಹಾಕಿ ಅದರ ಆಧಾರದಲ್ಲೇ ಈ ದಾಳಿ ಮಾಡಿದೆ‌.

ಜಾರಿ ಬಿದ್ದ ಕುದುರೆಗಳು

ನವೆಂಬರ್ 17ರಂದು ರೇಸ್‌ ನಡೆಯುವ ವೇಳೆ ಮೂರು ಕುದುರೆಗಳು ಜಾರಿಬಿದ್ದು, ಇಬ್ಬರು ಜಾಕಿಗಳು ಗಾಯಗೊಂಡಿದ್ದರು. ರೇಸ್ ನಿಲ್ಲಿಸಿದ್ದರಿಂದ ರೊಚ್ಚಿಗೆದ್ದ ಪ್ರೇಕ್ಷಕರು ಗಲಾಟೆ ಮಾಡಿದ್ದರು.

ಅದು ಈ ವರ್ಷದ ಮೊದಲನೇ ರೇಸ್ ಆಗಿತ್ತು. ಮಳೆ ಬಂದಿದ್ದರಿಂದ ಕುದುರೆಗಳು ಓಡುವ ಜಾಗದಲ್ಲಿ ನೀರು ನಿಂತಿತ್ತು. ಮೊದಲೇ ರೇಸಿನಲ್ಲಿ ಹಣ ಕಳೆದುಕೊಂಡವರು ಅರ್ಧದಲ್ಲೇ ರೇಸ್‌ ನಿಲ್ಲಿಸಿದ್ದರಿಂದ ಪ್ರಕ್ಷೇಕರು ಆವರಣದಲ್ಲಿದ್ದ ಕುರ್ಚಿ, ಟಿ.ವಿ. ಟೇಬಲ್‌ಗಳನ್ನು ಧ್ವಂಸಗೊಳಿಸಿ ಆಕ್ರೋಶ ವ್ಯಕ್ತಪಡಿಸಿದ್ದರು. ಸ್ಥಳಕ್ಕೆ ಆಗಮಿಸಿದ ಪೊಲೀಸರು ಪ್ರೇಕ್ಷಕರನ್ನು ಚದುರಿಸಿ ಪರಿಸ್ಥಿತಿ ತಿಳಿಗೊಳಿಸಿದ್ದರು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು