ಬೆಂಗಳೂರು: ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದ ಕೊಠಡಿಯೊಂದರಲ್ಲಿ ವಿಚಾರಣಾಧೀನ ಕೈದಿ ಬಳಿ ಮೊಬೈಲ್ ಪತ್ತೆಯಾಗಿದ್ದು, ಈ ಬಗ್ಗೆ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.

‘ಡ್ರಗ್ಸ್ ಪ್ರಕರಣದಲ್ಲಿ ಜೈಲು ಸೇರಿರುವ ಆರೋಪಿ ಸ್ಯಾಮುಯೆಲ್ ಚಿನ್ವೇಕೆ ಬಳಿ ಮೊಬೈಲ್ ಹಾಗೂ ಚಾರ್ಜರ್ ಸಿಕ್ಕಿದೆ. ಈ ಬಗ್ಗೆ ಜೈಲಿನ ಅಧಿಕಾರಿಗಳು ದೂರು ನೀಡಿದ್ದು, ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಲಾಗಿದೆ’ ಎಂದು ಪೊಲೀಸ್ ಮೂಲಗಳು ಹೇಳಿವೆ.

‘ಸ್ಯಾಮುಯೆಲ್ನನ್ನು ಬಂಧಿಸಿದ್ದ ಕಸ್ಟಮ್ಸ್ ಅಧಿಕಾರಿಗಳು, ಜೈಲಿಗೆ ಬಿಟ್ಟಿದ್ದರು. ಜೈಲಿನೊಳಗೆ ಅಕ್ರಮವಾಗಿ ಮೊಬೈಲ್ ತರಿಸಿಕೊಂಡಿದ್ದ ಆರೋಪಿ, ಪರಿಚಯಸ್ಥರು ಹಾಗೂ ಇತರರಿಗೆ ಕರೆ ಮಾಡುತ್ತಿದ್ದ. ಈ ಬಗ್ಗೆ ಮಾಹಿತಿ ಕಲೆಹಾಕಿದ್ದ ಗುಪ್ತದಳದ ಸಿಬ್ಬಂದಿ, ಜೈಲಿನ ಅಧಿಕಾರಿಗಳಿಗೆ ವಿಷಯ ತಿಳಿಸಿದ್ದರು.’

‘ನ. 2ರಂದು ಆರೋಪಿಯ ಕೊಠಡಿಗೆ ಹೋಗಿದ್ದ ಜೈಲಿನ ಸಿಬ್ಬಂದಿ, ತಪಾಸಣೆ ನಡೆಸಿದ್ದರು. ತಲೆದಿಂಬಿನ ಕೆಳಭಾಗದಲ್ಲಿ ಮೊಬೈಲ್ ಹಾಗೂ ಚಾರ್ಜರ್ ಸಿಕ್ಕವು. ಇವುಗಳನ್ನು ಆರೋಪಿಗೆ ತಂದುಕೊಟ್ಟವರು ಯಾರು ? ಪ್ರಕರಣದಲ್ಲಿ ಜೈಲಿ ಸಿಬ್ಬಂದಿಯ ಪಾತ್ರವೇನಾದರೂ ಇದೆಯಾ ? ಎಂಬುದು ತನಿಖೆಯಿಂದ ತಿಳಿಯಬೇಕಿದೆ’ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.