ಶುಕ್ರವಾರ, ಜುಲೈ 1, 2022
26 °C

ಚಂದ್ರಯಾನ–2ಕ್ಕೆ ಸಾಫ್ಟ್‌ವೇರ್‌ ಅಭಿವೃದ್ಧಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Deccan Herald

ಬೆಂಗಳೂರು: ಇಸ್ರೊದ ಉದ್ದೇಶಿತ ‘ಚಂದ್ರಯಾನ–2’ ಕ್ಕೆ ನಗರದ ನವೋದ್ಯಮ ಕಂಪನಿಯೊಂದು ಮಹತ್ವದ ಸಾಫ್ಟ್‌ವೇರ್
ಅಭಿವೃದ್ಧಿಪಡಿಸಿದೆ.

ದೆಹಲಿ ಮೂಲದ ಸಾಫ್ಟ್‌ವೇರ್‌ ಮತ್ತು ಹಾರ್ಡ್‌ವೇರ್‌ ಅಭಿವೃದ್ಧಿ ಕಂಪನಿ ಆಮ್ನಿಪ್ರೆಸೆಂಟ್‌ ರೋಬಾಟ್‌ ಟೆಕ್‌ನ ಬೆಂಗಳೂರು ಕೇಂದ್ರವು ರೋವರ್‌ ಇಮೇಜಿಂಗ್‌ ಮತ್ತು ನ್ಯಾವಿಗೇಷನ್‌ ಕೌಶಲದ ಸಾಫ್ಟ್‌ವೇರ್‌ ಸಿದ್ಧಪಡಿಸಿದೆ.

ಚಂದ್ರನ ಅಂಗಳದ ಮೇಲೆ ಲ್ಯಾಂಡರ್‌ ಮತ್ತು ರೋವರ್‌ ಇಳಿದ ಬಳಿಕ ಈ ಸಾಫ್ಟ್‌ವೇರ್‌ ನೆರವಿನಿಂದ ಕಾರ್ಯಾಚರಣೆ ನಡೆಸಲಾಗುವುದು ಎಂದು ಕಂಪನಿಯ ಅಧಿಕಾರಿಗಳು ತಿಳಿಸಿದ್ದಾರೆ.

‘ಆಮ್ನಿ3 ಡಿ’ ಸಾಫ್ಟ್‌ವೇರ್‌ ಚಂದ್ರನ ಮೇಲ್ಮೈಯಲ್ಲಿ ರೋವರ್‌ ಚಲಿಸಲು ಸಹಾಯ ಮಾಡಲಿದೆ. ಕಲ್ಲು ಮತ್ತು ಇತರ ಪದಾರ್ಥ
ಗಳನ್ನು ಗುರುತಿಸುವುದು, ಒಂದು ತುದಿಯಿಂದ ಮತ್ತೊಂದು ತುದಿಗೆ ದಾರಿಯನ್ನು ಮಾಡಿಕೊಂಡು ಚಲಿಸಲು ಇದರಿಂದ ಸಾಧ್ಯ ಎಂದು ಆಮ್ನಿಪ್ರೆಸೆಂಟ್‌ನ ಸಿಇಒ ಹಾಗೂ ಸ್ಥಾಪಕ ಆಕಾಶ್‌ ಸಿನ್ಹಾ ‘ಪ್ರಜಾವಾಣಿ’ಗೆ ತಿಳಿಸಿದರು.

ಚಂದ್ರನ ಮೇಲಿನ ದೊರಗಾದ ನೆಲ, ಕಲ್ಲುಗಳು ಮತ್ತು ಕತ್ತಲಿನಿಂದ ರೋವರ್‌ಗೆ ಚಲಿಸಲು ಕಷ್ಟವಾಗುತ್ತದೆ. ಈ ಸಮಸ್ಯೆಗಳು ಮತ್ತು ಅಡ್ಡಿಗಳನ್ನು ನಿವಾರಿಸಿಕೊಂಡು ಮುಂದಕ್ಕೆ ಸಾಗಲು ಸಾಫ್ಟ್‌ವೇರ್‌ ಸಹಕಾರಿಯಾಗುತ್ತದೆ ಎಂದು ಅವರು ತಿಳಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು