ಬುಧವಾರ, 4 ಅಕ್ಟೋಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಗಳೂರು| ಮಗು ಮೇಲೆ ಅತ್ಯಾಚಾರ: ತಂದೆ, ಮಗನ ಬಂಧನ

Published 17 ಆಗಸ್ಟ್ 2023, 0:30 IST
Last Updated 17 ಆಗಸ್ಟ್ 2023, 0:30 IST
ಅಕ್ಷರ ಗಾತ್ರ

ಬೆಂಗಳೂರು: ಐದು ವರ್ಷದ ಮಗುವಿನ ಮೇಲೆ ನಿರಂತರ ಅತ್ಯಾಚಾರ ಎಸಗುತ್ತಿದ್ದ ತಂದೆ ಹಾಗೂ ಮಗನನ್ನು ಕಾಮಾಕ್ಷಿಪಾಳ್ಯ ಠಾಣೆ ಪೊಲೀಸರು ಬಂಧಿಸಿದ್ದಾರೆ. ಇಬ್ಬರ ವಿರುದ್ಧ ಪೋಕ್ಸೊ ಕಾಯ್ದೆ ಅಡಿ ಪ್ರಕರಣ ದಾಖಲಾಗಿದೆ. 

55 ವರ್ಷದ ತಂದೆಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ನಗರದ ಕಾಲೇಜೊಂದರಲ್ಲಿ ಪಿಯುಸಿ ಓದುತ್ತಿರುವ ಪುತ್ರನನ್ನು ಬಾಲಮಂದಿರಕ್ಕೆ ಕಳುಹಿಸಲಾಗಿದೆ ಎಂದು ಪೊಲೀಸ್‌ ಮೂಲಗಳು ಹೇಳಿವೆ.

ಪೊಲೀಸ್‌ ಠಾಣಾ ವ್ಯಾಪ್ತಿಯ ಪ್ರದೇಶವೊಂದರಲ್ಲಿ ನೆಲೆಸಿದ್ದ ಬಂಧಿತರು, ಸಂತ್ರಸ್ತೆಯ ಕುಟುಂಬದ ಸಂಬಂಧಿಕರು. ಸಂಬಂಧಿಕರೆಂಬ ಕಾರಣಕ್ಕೆ ತಾಯಿ, ಮಗುವನ್ನು ಆರೋಪಿಗಳ ಮನೆಯಲ್ಲಿ ಬಿಟ್ಟು ಕೆಲಸಕ್ಕೆ ತೆರಳುತ್ತಿದ್ದರು. ಈ ವೇಳೆ ಮಗುವಿನ ಮೇಲೆ ದೌರ್ಜನ್ಯ ಎಸಗಲಾಗಿದೆ ಎಂದು ಮೂಲಗಳು ಹೇಳಿವೆ.

‘ಲೈಂಗಿಕ ಕ್ರಿಯೆಯನ್ನು ಮಗುವಿಗೆ ಆಟವೆಂದು ಆರೋಪಿಗಳು ಹೇಳುತ್ತಿದ್ದರು’ ಎಂದು ತನಿಖಾಧಿಕಾರಿಗಳು ತಿಳಿಸಿದ್ದಾರೆ.

‘ದಿನ ಕಳೆದಂತೆ ಮಗುವಿಗೆ ಅಲರ್ಜಿ ಆಗಿತ್ತು. ಕ್ಲಿನಿಕ್‌ವೊಂದಕ್ಕೆ ಕರೆದೊಯ್ದರೂ ವೈದ್ಯರು ಕಾರಣ ಪತ್ತೆ ಮಾಡಿರಲಿಲ್ಲ. ಬಳಿಕ ಸಂಬಂಧಿಕರೊಬ್ಬರ ಮನೆಗೆ ತೆರಳಿದಾಗ ಅಲ್ಲಿ ಮಗು ವಿಚಿತ್ರ ವರ್ತನೆ ಮಾಡಲು ಆರಂಭಿಸಿತ್ತು. ಅಲ್ಲಿ ಮಗುವನ್ನು ವಿಚಾರಿಸಿದಾಗ ತಂದೆ ಹಾಗೂ ಮಗ ದೌರ್ಜನ್ಯ ಎಸಗುತ್ತಿರುವುದನ್ನು ಹೇಳಿಕೊಂಡಿತ್ತು’ ಎಂದು ಅವರು ತಿಳಿಸಿದ್ದಾರೆ.

ಸಂತ್ರಸ್ತೆ ಮಗುವನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿದ್ದು, ಆಕೆಯ ಮೇಲೆ ಲೈಂಗಿಕ ದೌರ್ಜನ್ಯ ನಡೆದಿರುವುದು ದೃಢಪಟ್ಟಿದೆ ಎಂದು ಮೂಲಗಳು ಹೇಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT