ಬೆಂಗಳೂರು: ಮಕ್ಕಳ ಹಕ್ಕುಗಳ ರಾಯಭಾರಿಯನ್ನಾಗಿ ‘ಕೇರ್ ಆಫ್ ಫುಟ್ಪಾತ್’ ಸಿನಿಮಾ ಖ್ಯಾತಿಯ ಕಿಶನ್ ಅವರನ್ನು ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ನೇಮಕ ಮಾಡಿದೆ.

‘ಈ ಅವಕಾಶ ನೀಡಿದ್ದಕ್ಕಾಗಿ ಆಯೋಗಕ್ಕೆ ಧನ್ಯವಾದ ಹೇಳುತ್ತೇನೆ. ಕೊಳಚೆ ಪ್ರದೇಶಗಳಲ್ಲಿ ಬೆಳೆಯುವ ಮಕ್ಕಳಿಗೆ ಹಲವು ಸೌಲಭ್ಯಗಳು ಸಿಗುತ್ತಿಲ್ಲ. ಶಿಕ್ಷಣದಿಂದಲೂ ವಂಚಿತರಾಗುತ್ತಿದ್ದಾರೆ. ಸಮಾಜದಲ್ಲಿ ಮಾನವೀಯ ಸಂಬಂಧಗಳು ಬಲಗೊಳ್ಳಬೇಕು. ಮಕ್ಕಳ ಬಾಲ್ಯವನ್ನು ರಕ್ಷಿಸುವ ಕೆಲಸವಾಗಬೇಕು’ ಎಂದು ಕಿಶನ್ ಅಭಿಪ್ರಾಯಪಟ್ಟರು.

ಆಯೋಗದ ಅಧ್ಯಕ್ಷ ಡಾ. ಆಂಟೋನಿ ಸೆಬಾಸ್ಟಿಯನ್, ‘ಆಯೋಗದ ರಾಯಭಾರಿಯಾಗಿ ಕಾರ್ಯನಿರ್ವಹಿಸಲು ಮುಂದೆ ಬಂದಿರುವ ಕಿಶನ್ ಅವರ ಸಾಮಾಜಿಕ ಹೊಣೆಗಾರಿಕೆ ಮೆಚ್ಚುವಂಥದ್ದು’ ಎಂದರು.

ಸುಮಾರು 200 ದೇಶಗಳ ರಾಷ್ಟ್ರಗೀತೆಗಳನ್ನು ಹಾಡುವ ಮೂಲಕ ದೇಶದ ಗಮನ ಸೆಳೆದಿರುವ ಮಾಸ್ಟರ್ ಯಥಾರ್ಥ ಅವರನ್ನು ಇದೇ ಸಂದರ್ಭದಲ್ಲಿ ಸನ್ಮಾನಿಸಲಾಯಿತು.

ದಕ್ಷಿಣ ಭಾರತದ ಯುನಿಸೆಫ್ ಪ್ರತಿನಿಧಿ ಸೋನಿ ಕುಟ್ಟಿ ಜಾರ್ಜ್, ಆಯೋಗದ ಸದಸ್ಯರಾದ ಎಂ.ಎಲ್. ಪರಶುರಾಮ, ಡಿ. ಶಂಕ್ರಪ್ಪ, ಎಚ್.ಸಿ. ರಾಘವೇಂದ್ರ, ಅಶೋಕ ಯರಗಟ್ಟಿ, ಭಾರತಿ ಹಾಗೂ ಆಯೋಗದ ಕಾರ್ಯದರ್ಶಿ ಇಂದಿರಾ, ಸಹಾಯಕ ನಿರ್ದೇಶಕಿ ಕವಿತಾ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.