ಮಂಗಳವಾರ, ಜನವರಿ 28, 2020
29 °C

ದಟ್ಟಣೆಯಲ್ಲಿ ಮಕ್ಕಳ ಬಿಟ್ಟು ಹೋದ ಪೋಷಕರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಅವೆನ್ಯೂ ರಸ್ತೆಯ ದೊಡ್ಡಪೇಟೆ ವೃತ್ತದ ದಟ್ಟಣೆಯಲ್ಲೇ ಮಕ್ಕಳಿಬ್ಬರನ್ನು ಬಿಟ್ಟು ಪೋಷಕರು ನಾಪತ್ತೆಯಾಗಿದ್ದು, ಅಳ್ಳುತ್ತ ನಿಂತಿದ್ದ ಮಕ್ಕಳನ್ನು ರಕ್ಷಿಸಿ ಶಿಶು ಮಂದಿರಲ್ಲಿ ಆಶ್ರಯ ಕಲ್ಪಿಸಲಾಗಿದೆ.

ಈ ಸಂಬಂಧ ಸಿಟಿ ಮಾರ್ಕೆಟ್ ಠಾಣೆ ಪೊಲೀಸರು ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡಿದ್ದಾರೆ. 

‘3 ಹಾಗೂ 4 ವರ್ಷದ ಮಕ್ಕಳನ್ನು ಜನರು ಹೆಚ್ಚು ಓಡಾಡುವ ಸ್ಥಳದಲ್ಲಿ ನಿಲ್ಲಿಸಿ ಪೋಷಕರು ತಲೆಮರೆಸಿಕೊಂಡಿದ್ದಾರೆ. ಅಳುತ್ತ ನಿಂತಿದ್ದ ಮಕ್ಕಳನ್ನು ಸ್ಥಳೀಯರು ವಿಚಾರಿಸಿದ್ದರು. ಮಕ್ಕಳ ವಿಳಾಸ ಹಾಗೂ ಪೋಷಕರ ಬಗ್ಗೆ ಗೊತ್ತಾಗಿರಲಿಲ್ಲ. ಗಸ್ತು ಪೊಲೀಸರಿಗೆ ಮಾಹಿತಿ ನೀಡಿದ್ದರು. ಅವರೇ ಮಕ್ಕಳನ್ನು ರಕ್ಷಿಸಿ ಶಿಶುಮಂದಿರಕ್ಕೆ ಸೇರಿಸಿದ್ದಾರೆ’ ಎಂದು ಪೊಲೀಸ್ ಮೂಲಗಳು ಹೇಳಿವೆ.

‘ಮಕ್ಕಳ ರಕ್ಷಣೆ ಹಾಗೂ ಪಾಲನೆ ಹೊಣೆ ತಪ್ಪಿಸಿಕೊಳ್ಳುವುದಕ್ಕಾಗಿ ಪೋಷಕರು ಈ ರೀತಿ ಮಾಡಿರುವ ಶಂಕೆ ಇದೆ. ಪೋಷಕರ ಪತ್ತೆಗಾಗಿ ಅವೆನ್ಯೂ ರಸ್ತೆಯಲ್ಲಿರುವ ಸಿ.ಸಿ.ಟಿ.ವಿ ಕ್ಯಾಮೆರಾ ಪರಿಶೀಲನೆ ನಡೆಸಲಾಗುತ್ತಿದೆ’ ಎಂದು ಮೂಲಗಳು ತಿಳಿಸಿವೆ. 

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು