ಬೆಂಗಳೂರು: ಜಯನಗರ ಒಂಬತ್ತನೇ ಬ್ಲಾಕ್‌ನಲ್ಲಿರುವ ರಾಗೀಗುಡ್ಡ ಶ್ರೀ ಪ್ರಸನ್ನ ಆಂಜನೇಯ ಸ್ವಾಮಿ ವಿದ್ಯಾಕೇಂದ್ರ ಪ್ರೌಢಶಾಲೆಯು ವಿದ್ಯಾರ್ಥಿಗಳಿಗಾಗಿ ಸರಸ್ವತಮ್ಮ ಸ್ಮಾರಕ ಅಂತರ ಶಾಲಾ ಶಾಸ್ತ್ರೀಯ ಸಂಗೀತ ಸ್ಪರ್ಧೆಯನ್ನು ಆಗಸ್ಟ್ 23ರಂದು ಆಯೋಜಿಸಿದೆ.
ಕಿರಿಯರ ವಿಭಾಗದಲ್ಲಿ ದೇವರ ನಾಮ, ಪ್ರೌಢಶಾಲಾ ವಿಭಾಗದಲ್ಲಿ ಕೀರ್ತನೆ ಗಾಯನ(ಕರ್ನಾಟಕ ಶೈಲಿ) ಸ್ಪರ್ಧೆ ನಡೆಯಲಿವೆ. ಸ್ಪರ್ಧಿಯ ಹೆಸರು, ತರಗತಿ, ಶಾಲೆಯ ವಿವರಗಳೊಂದಿಗೆ ಇ–ಮೇಲ್ ಮುಖಾಂತರ ನೋಂದಾಯಿಸಬಹುದು. ಇ–ಮೇಲ್: ragiguddavk@gmail.com
ವಿಳಾಸ: ರಾಗೀಗುಡ್ಡದ ಶ್ರೀ ಪ್ರಸನ್ನ ಆಂಜನೇಯ ಸ್ವಾಮಿ ವಿದ್ಯಾಕೇಂದ್ರ, ರಾಗೀಗುಡ್ಡ ಜಯನಗರ 9ನೇ ಬಡಾವಣೆ ಬೆಂಗಳೂರು. ದೂರವಾಣಿ ಸಂಖ್ಯೆ: 080–26587646, 080–26594244