ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಡಾ. ರಾಜ್‌ ಪುತ್ಥಳಿ ಅನಾವರಣ ಮಾಡಿದ ಸಿಎಂ ಬೊಮ್ಮಾಯಿ

Last Updated 8 ಮಾರ್ಚ್ 2023, 20:45 IST
ಅಕ್ಷರ ಗಾತ್ರ

ಬೆಂಗಳೂರು: ಮಹಾಲಕ್ಷ್ಮೀ ಲೇಔಟ್ ವಿಧಾನಸಭೆ ಕ್ಷೇತ್ರದ ವ್ಯಾಪ್ತಿಯ ನಾಗಪುರ ವಾರ್ಡ್‌ನಲ್ಲಿ ಸ್ಥಾಪಿಸಿರುವ ರಾಜ್‌ಕುಮಾರ್ ಪುತ್ಥಳಿಯನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ನಗರದಲ್ಲಿ ಬುಧವಾರ ಅನಾವರಣ ಮಾಡಿದರು.

ಈ ಪುತ್ಥಳಿಯನ್ನು ₹ 75 ಲಕ್ಷದಲ್ಲಿ ನಿರ್ಮಿಸಲಾಗಿದ್ದು, 4 ಅಡಿ ಅಗಲ ಹಾಗೂ 9 ಅಡಿ ಎತ್ತರವಿದೆ. ಈ ಪುತ್ಥಳಿ ಸುತ್ತಲೂ ಸಾದರಹಳ್ಳಿ ಕಲ್ಲುಗಳನ್ನು ಬಳಸಿ, ಪೀಠ ನಿರ್ಮಿಸಲಾಗಿದೆ.

‘ಪುರುಷ ಪ್ರಧಾನ ಸಮಾಜವಾದರೂ ಇತ್ತೀಚಿನದ ದಿನಗಳಲ್ಲಿ ಮಹಿಳೆಯರು ಅದ್ಭುತ ಸಾಧನೆ ಮಾಡುತ್ತಿದ್ದಾರೆ. ವಿಮಾನ, ಬಸ್‌ಗಳನ್ನು ಓಡಿಸುವವರಲ್ಲಿಯೂ ಮಹಿಳೆಯರಿದ್ದಾರೆ. ಸರ್ಕಾರದ ಮುಖ್ಯ ಕಾರ್ಯದರ್ಶಿಯೂ ಮಹಿಳೆಯಾಗಿದ್ದಾರೆ. ಎಲ್ಲ ರಂಗದಲ್ಲಿಯೂ ಮಹಿಳೆಯರು ಛಾ‍ಪು ಮೂಡಿಸುತ್ತಿದ್ದಾರೆ’ ಎಂದು ಮುಖ್ಯಮಂತ್ರಿ ಬೊಮ್ಮಾಯಿ ಮೆಚ್ಚುಗೆ ವ್ಯಕ್ತಪಡಿಸಿದರು.

‘ಸೇಫ್‌ ಸಿಟಿ ಪ್ರಾಜೆಕ್ಟ್‌ನಲ್ಲಿ ಸುರಕ್ಷತೆಗೆ ರಾಜ್ಯದಲ್ಲಿ 7 ಸಾವಿರ ಕ್ಯಾಮೆರಾ ಅಳವಡಿಸಲಾಗಿದೆ. ಮಹಿಳೆಯರ ಮೇಲಿನ ವಿಶ್ವಾಸದಿಂದ ಕಾನೂನು ಸಡಿಲಿಸಿ, ರಾತ್ರಿ ಪಾಳಯದಲ್ಲಿಯೂ ಕಾರ್ಯನಿರ್ವಹಿಸಲು ಅವಕಾಶ ಮಾಡಿಕೊಡಲಾಗಿದೆ’ ಎಂದರು.

ಚಲನಚಿತ್ರ ನಟ, ನಿರ್ಮಾಪಕ ರಾಘವೇಂದ್ರ ರಾಜ್‌ಕುಮಾರ್, ‘ಅಪ್ಪಾಜಿ ಹೆಣ್ಣನ್ನು ಗೌರವದಿಂದ ಕಾಣುತ್ತಿದ್ದರು. ಹೆಣ್ಣನ್ನು ಪೂಜಿಸಬೇಕು ಎಂದು ಹೇಳುತ್ತಿದ್ದರು. ಮಹಿಳಾ ದಿನದಂದು ಅವರ ಪ್ರತಿಮೆ ಅನಾವರಣ ಖುಷಿಯ ವಿಚಾರ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT