ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪುಣೆ ಕಾಲೇಜಿಗೆ ಬಹುಮಾನ

Last Updated 8 ಅಕ್ಟೋಬರ್ 2018, 19:58 IST
ಅಕ್ಷರ ಗಾತ್ರ

ಬೆಂಗಳೂರು: ರಾಷ್ಟ್ರೀಯ ಅಣಕು ನ್ಯಾಯಾಲಯ ಸ್ಪರ್ಧೆಯಲ್ಲಿ ಪುಣೆಯ ಸಿಂಬೋಸಿಸ್‌ ಲಾ ಸ್ಕೂಲ್‌ ಜಯಗಳಿಸಿದೆ.

ನಗರದ ಸಿಎಂಆರ್‌ ವಿಶ್ವವಿದ್ಯಾಲಯದ ಸ್ಕೂಲ್‌ ಆಫ್‌ ಲೀಗಲ್‌ ಸ್ಟಡೀಸ್‌ ವತಿಯಿಂದ ಮೂರು ದಿನಗಳ ಕಾಲ ಈ ಸ್ಪರ್ಧೆ ನಡೆಯಿತು.

ದೇಶದ ವಿವಿಧ ಭಾಗಗಳಿಂದ 24 ಕಾನೂನು ಕಾಲೇಜುಗಳ ವಿದ್ಯಾರ್ಥಿಗಳುಭಾಗವಹಿಸಿದ್ದರು.

ವಿಜೇತರ ವಿವರ: ಪ್ರವೀಣ್‌ ಗಾಂಧಿ ಕಾಲೇಜು ಮುಂಬೈ (ರನ್ನರ್‌), ಚಾಣಕ್ಯ ರಾಷ್ಟ್ರೀಯ ಕಾನೂನು ವಿಶ್ವವಿದ್ಯಾಲಯ ಪಟ್ನಾ (ಬೆಸ್ಟ್‌ ಮೆಮೋ ಪ್ರಶಸ್ತಿ), ಮಿಸ್ತಿ ಸೇಠ್‌, ಸಿಂಬೋಸಿಸ್‌ ಲಾ ಸ್ಕೂಲ್‌ ಹೈದರಾಬಾದ್‌ (ಉತ್ತಮ ವಿದ್ಯಾರ್ಥಿ ವಕೀಲೆ ಪ್ರಶಸ್ತಿ) ಪುಣೆಯ ವಿಜೇತ ತಂಡಕ್ಕೆ ₹25 ಸಾವಿರ ನಗದು ಮತ್ತು ಟ್ರೋಫಿ, ರನ್ನರ್ ಅಪ್‌ ವಿಜೇತ ತಂಡಕ್ಕೆ ₹15 ಸಾವಿರ ನಗದು ಬಹುಮಾನ ಮತ್ತು ಪ್ರಶಸ್ತಿ ಫಲಕ ನೀಡಲಾಯಿತು.

ಬೆಸ್ಟ್‌ ಮೆಮೋ ಪ್ರಶಸ್ತಿ ಮತ್ತು ಉತ್ತಮ ವಿದ್ಯಾರ್ಥಿ ವಕೀಲೆ ಬಹುಮಾನ ವಿಜೇತರಿಗೆ ತಲಾ ₹5 ಸಾವಿರ ನಗದು ಬಹುಮಾನ ನೀಡಲಾಯಿತು.

ಸುಸ್ತಿದಾರನೇ ಬ್ಯಾಂಕ್‌ ಸಿಇಒ: ಆಕ್ಷೇಪ

ಬೆಂಗಳೂರು: ಸುಸ್ತಿದಾರನನ್ನೇ ಸಹಕಾರ ಬ್ಯಾಂಕ್‌ನ ಮುಖ್ಯ ಕಾರ್ಯನಿರ್ವಹಣಾಧಿಕಾರಿಯನ್ನಾಗಿಸಿದ್ದಕ್ಕೆ ರೈತರು ಆಕ್ಷೇಪಿಸಿದ್ದಾರೆ.

ಹೆಸರಘಟ್ಟ ಗ್ರಾಮದ ರೈತರ ಸೇವಾ ಸಹಕಾರ ಸಂಘದಲ್ಲಿ ಸಿಬ್ಬಂದಿ ಸಾಲದ ಪಟ್ಟಿಯಲ್ಲಿ ಹಾಲಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಪುರುಷೋತ್ತಮ ಅವರು ಪಡೆದ₹7 ಲಕ್ಷ ಮೌಲ್ಯದ ಆಭರಣ ಸಾಲವು ಕಂತು ಪಾವತಿಸದೇ ಸುಸ್ತಿಯಾಗಿದೆ. ಪುರುಷೋತ್ತಮ ಅವರು ಈ ಹಿಂದೆ ದ್ವಿತೀಯ ದರ್ಜೆ ಸಹಾಯಕರಾಗಿದ್ದರು. ಆಗ ಸಂಘದಲ್ಲಿ ಸಾಲ ಪಡೆದಿದ್ದ ಅವರು 2014ರಿಂದ 2018ರ ತನಕ ಬಡ್ಡಿ ರೂಪವಾಗಿ ₹ 2,95,795ಗಳನ್ನು ಕಟ್ಟಬೇಕಾಗಿತ್ತು. ಅಸಲು, ಬಡ್ಡಿ ಯಾವುದನ್ನೂ ಅವರು ಪಾವತಿಸಿಲ್ಲ. ಅವರನ್ನೇ ಸಿಇಒ ಹುದ್ದೆಗೇರಿಸಲಾಗಿದೆ. ಬ್ಯಾಂಕ್ ಸಿಬ್ಬಂದಿಯೇ ಹೀಗೆ ಸುಸ್ತಿಯಾದರೆ ಉಳಿದವರ ಪಾಡು ಏನು? ಎಂದು ರೈತರು ಪ್ರಶ್ನಿಸಿದ್ದಾರೆ.

ಯಲಹಂಕ ಉತ್ತರ ವಲಯದ ಸಹಕಾರ ಸಂಘಗಳ ನಿರೀಕ್ಷಕರಾದ ಸುಂದರರಾಜು ಜೆ.ಟಿ. ಪ್ರತಿಕ್ರಿಯಿಸಿ ‘ಆಭರಣಗಳ ಮೇಲೆ ತೆಗೆದುಕೊಂಡ ಸಾಲವನ್ನು 12 ತಿಂಗಳ ಒಳಗೆ ಕಟ್ಟದಿದ್ದರೆ ಆಭರಣಗಳನ್ನು ಹರಾಜು ಹಾಕಬೇಕು. ಇಷ್ಟು ವರ್ಷಗಳ ಕಾಲ ಸುಮ್ಮನೆ ಇಟ್ಟುಕೊಂಡಿದ್ದು ತಪ್ಪು. ಆಡಳಿತ ಮಂಡಳಿಗೆ ಈ ಕೂಡಲೇ ಕ್ರಮ ಕೈಗೊಳ್ಳಲು ಆದೇಶಿಸುತ್ತೇನೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT