ಬೆಂಗಳೂರು: ‘ಸಿಎಂಆರ್ ವಿಶ್ವವಿದ್ಯಾಲಯವು, ಅಮೆರಿಕದ ಇನ್ಸ್ಟಿಟ್ಯೂಟ್ ಆಫ್ ಪ್ರಾಡಕ್ಟ್ ಲೀಡರ್ಶಿಪ್ ಇಂಕ್ ಸಂಸ್ಥೆಯ ಸಹಭಾಗಿತ್ವದಲ್ಲಿ ಎಂಬಿಎ ಪದವಿಯಲ್ಲಿ ತಾಂತ್ರಿಕ ನಿರ್ವಹಣೆ ಕಲಿಸುವ ‘ಎಂಬಿಎ ಇನ್ ಟೆಕ್ನಾಲಜಿ ಮ್ಯಾನೇಜ್ಮೆಂಟ್’ ಎಂಬ ಕೋರ್ಸ್ ಆರಂಭಿಸುತ್ತಿದೆ’ ಎಂದು ವಿಶ್ವವಿದ್ಯಾಲಯದ ಸಮ ಕುಲಪತಿ ಜಯದೀಪ್ ಕೆ.ಆರ್.ರೆಡ್ಡಿ ತಿಳಿಸಿದರು.

ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಇದು ಉದ್ಯಮ ಕ್ಷೇತ್ರವನ್ನು ಬೆಂಬಲಿಸುವಂತಹ ಕೋರ್ಸ್. ಉನ್ನತ ತಂತ್ರಜ್ಞಾನಗಳ ಕಾಲದಲ್ಲಿ ಉದ್ಯಮವನ್ನು ಯಶಸ್ವಿಯಾಗಿಸಲು ವೃತ್ತಿಪರರಿಗೆ ಅಗತ್ಯವಿರುವ ನೈಪುಣ್ಯವನ್ನು ಕಲಿಸುವಂತೆ ಈ ಕೋರ್ಸ್ ಅನ್ನು ವಿನ್ಯಾಸಗೊಳಿಸಲಾಗಿದೆ. ಈ ಹೊಸ ಕೋರ್ಸ್ನಿಂದ ಟೆಕ್ನೊ ಮ್ಯಾನೇಜರ್ಗಳು ರೂಪುಗೊಳ್ಳಲಿದ್ದಾರೆ’ ಎಂದರು.

ಇನ್ಸ್ಟಿಟ್ಯೂಟ್ ಆಫ್ ಪ್ರಾಡಕ್ಟ್ ಲೀಡರ್ಶಿಪ್ ಇಂಕ್ನ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಸಾಯಿ ಸತೀಶ್ ವೇದಂ ಮಾತನಾಡಿ, ‘ಮ್ಯಾನೇಜ್ಮೆಂಟ್ ಪರಿಕಲ್ಪನೆ ಈಗ ವಿಕಸನಗೊಂಡಿದೆ. ಮಾನವ ಸಂಪನ್ಮೂಲ ನಿರ್ವಹಣೆಯಿಂದ ಡಿಟಿಜಲ್ ಸಂಪನ್ಮೂಲದ ನಿರ್ವಹಣೆಯಡೆಗೆ ಹೊರಳಿದೆ. ಇದಕ್ಕೆ ತಕ್ಕಂತೆ ಉದ್ಯಮ–ತಾಂತ್ರಿಕತೆಯನ್ನು ಸರಿದೂಗಿಸಬಲ್ಲ ಟೆಕ್ನೊ ಮ್ಯಾನೇಜರ್ಗಳ ಅಗತ್ಯವಿದೆ’ ಎಂದು ತಿಳಿಸಿದರು.

ಸಿಎಂಆರ್ ಸಮೂಹ ಸಂಸ್ಥೆಗಳ ಅಧ್ಯಕ್ಷ ಕೆ.ಸಿ.ರಾಮಮೂರ್ತಿ, ‘ಇನ್ಸ್ಟಿಟ್ಯೂಟ್ ಆಫ್ ಪ್ರಾಡಕ್ಟ್ ಲೀಡರ್ಶಿಪ್ ಜೊತೆಗಿನ ಸಹಭಾಗಿತ್ವವು ವ್ಯಾಪಾರೋದ್ಯಮಗಳಲ್ಲಿ ಯಶಸ್ಸು ಸಾಧಿಸಲು ಬೇಕಿರುವ ಕೌಶಲಗಳು, ಪ್ರತಿಭೆ ಹಾಗೂ ಅನುಭವವನ್ನು ಲಭ್ಯವಾಗಿಸುತ್ತದೆ’ ಎಂದು ಹೇಳಿದರು.

ಸಿಎಂಆರ್ ವಿಶ್ವವಿದ್ಯಾಲಯದ ಕುಲಪತಿ ಎಚ್.ಬಿ.ರಾಘವೇಂದ್ರ, ಡಿಲೈಟ್ ಲೂಪ್ ಸ್ಥಾಪಕ ಹಾಗೂ ಸಿಇಒ ಪಿಂಕೇಶ್ ಶಾ ಸುದ್ದಿಗೋಷ್ಠಿಯಲ್ಲಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.