ಬೆಂಗಳೂರು:ನಗರದ ಪೂರ್ವ ಹಾಗೂ ಪಶ್ಚಿಮ ವಿಭಾಗದಲ್ಲಿ ಪೊಲೀಸರು, ರಕ್ಷಣಾ ಪಡೆಗಳ ಜೊತೆಯಲ್ಲಿ ಪಥಸಂಚಲನ ನಡೆಸುತ್ತಿದ್ದಾರೆ. ಗಲಭೆ ಮರುಕಳಿಸಬಾರದೆಂಬ ಕಾರಣಕ್ಕೆ ಈ ಪಥಸಂಚಲನ ನಡೆಸಲಾಗುತ್ತಿದೆ.

ಎರಡೂ ವಿಭಾಗದಲ್ಲೂ ಅತೀ ಸೂಕ್ಷ್ಮ ಪ್ರದೇಶಗಳು ಇವೆ. ಹೀಗಾಗಿ ಡಿಸಿಪಿಗಳಾದ ಸಂಜೀವ್ ಪಾಟೀಲ ಹಾಗೂ ಎಸ್.ಡಿ. ಶರಣಪ್ಪ ನೇತೃತ್ವದಲ್ಲಿ ಪಥಸಂಚಲನ ನಡೆಸಿ, ಅಪರಾಧ ಕೃತ್ಯ ಎಸಗಲು ಮುಂದಾಗುವವರಿಗೆ ಎಚ್ಚರಿಕೆ ಸಂದೇಶ ರವಾನಿಸಲಾಗುತ್ತಿದೆ.

ಚಾಮರಾಜಪೇಟೆ, ಜೆ.ಜೆ.ನಗರ, ಸಿಟಿ ಮಾರ್ಕೆಟ್, ಶಿವಾಜಿನಗರ, ಕೆ.ಜಿ.ಹಳ್ಳಿ, ಡಿ.ಜೆ.ಹಳ್ಳಿ, ಪುಲಿಕೇಶಿನಗರ ಹಾಗೂ ಸುತ್ತಮುತ್ತ ಈ ಪಥಸಂಚಲನ ನಡೆಯುತ್ತಿದೆ.

ಹೈದರಾಬಾದ್ನ ಕ್ಷಿಪ್ರ ಕಾರ್ಯಪಡೆಯ ಯೋಧರೂ ಶಸ್ತ್ರಸಜ್ಜಿತವಾಗಿ ಪಥಸಂಚಲನದಲ್ಲಿ ಪಾಲ್ಗೊಂಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.