ಸೋಮವಾರ, ಅಕ್ಟೋಬರ್ 18, 2021
23 °C
ಬೀದಿ ನಾಯಿ ವಿಚಾರವಾಗಿ ಎರಡು ಕುಟುಂಬಗಳ ನಡುವೆ ಗಲಾಟೆ

ಮಲ್ಲೇಶ್ವರ: ಬೀದಿ ನಾಯಿಗೆ ಕಲ್ಲೇಟು, ಪೊಲೀಸ್‌ ಠಾಣೆಗೆ ದೂರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಬೀದಿ ನಾಯಿ ವಿಚಾರವಾಗಿ ಎರಡು ಕುಟುಂಬಗಳ ನಡುವೆ ಗಲಾಟೆ ನಡೆದಿದ್ದು, ಈ ಸಂಬಂಧ ಮಹಿಳೆಯೊಬ್ಬರು ನೆರೆಮನೆಯವರ ವಿರುದ್ಧ ಮಲ್ಲೇಶ್ವರ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

‘ನಾವು ಬೀದಿ ನಾಯಿಯೊಂದನ್ನು ಒಂದು ವರ್ಷದಿಂದ ಸಾಕುತ್ತಿದ್ದೇವೆ. ಅದು ಮನೆಯಲ್ಲೆಲ್ಲಾ ಓಡಾಡಿಕೊಂಡಿತ್ತು. ಒಮ್ಮೊಮ್ಮೆ ಹೊರಗೂ ಹೋಗಿ ಬರುತ್ತದೆ. ಅದಕ್ಕೆ ನೆರೆಹೊರೆಯವರು ತುಂಬಾ ತೊಂದರೆ ನೀಡುತ್ತಿದ್ದಾರೆ. ಕಲ್ಲಿನಿಂದ ಹೊಡೆದು ಗಾಯಗೊಳಿಸಿದ್ದಾರೆ. ಅದನ್ನು ಸಾಕಿದ್ದಕ್ಕಾಗಿ ಒಂದೂವರೆ ತಿಂಗಳಿಂದ ನಮಗೂ ಕಿರುಕುಳ ನೀಡುತ್ತಿದ್ದಾರೆ’ ಎಂದು ಮಲ್ಲೇಶ್ವರ 6ನೇ ತಿರುವಿನ ನಿವಾಸಿ ಅನುರಾಧಾ  ತಿಳಿಸಿದ್ದಾರೆ.

‘ಮೂಕ ಪ್ರಾಣಿಯನ್ನು ಹಿಂಸಿಸಲಾಗಿದೆ. ಅದನ್ನು ನಮ್ಮ ಮನೆಗೆ ಬರಲು ಬಿಡುತ್ತಿಲ್ಲ. ಗುಂಪು ಕಟ್ಟಿಕೊಂಡು ಬಂದು ನಾಯಿಯನ್ನು ಸಾಯಿಸುವುದಾಗಿ ಬೆದರಿಸಿದ್ದಾರೆ. ನನ್ನ ಪತಿ ಶ್ರೀನಿವಾಸ್‌ ಅವರನ್ನೂ ನಿಂದಿಸಿದ್ದಾರೆ. ಹೀಗಾಗಿ ದೂರು ನೀಡಿದ್ದೇವೆ. ಅವರು ತನಿಖೆ ನಡೆಸುತ್ತಿದ್ದಾರೆ’ ಎಂದು ಹೇಳಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು