ಬುಧವಾರ, 9 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

‘ಮನುಷ್ಯ ಸಂಬಂಧ ಬೆಸೆಯುವ ಕಲಾ ಬೇರುಗಳು’

‘ದೇವದಾಸಿ ಮತ್ತು ಜೋಗತಿ ಪರಂಪರೆ’ ವಿಚಾರ ಸಂಕಿರಣ
Published : 18 ಮೇ 2023, 20:54 IST
Last Updated : 18 ಮೇ 2023, 20:54 IST
ಫಾಲೋ ಮಾಡಿ
Comments

ಬೆಂಗಳೂರು: ‘ಕಲೆಯ ಬೇರುಗಳು ಮನುಷ್ಯ ಸಂಬಂಧಗಳನ್ನು ಬೆಸೆಯುತ್ತವೆ’ ಎಂದು ನಿರ್ದೇಶಕ ಟಿ.ಎಸ್. ನಾಗಾಭರಣ ಹೇಳಿದರು.

ಕೆಎಲ್‌ಇ ಕಾನೂನು ಮಹಾವಿದ್ಯಾಲಯದ ಪರಂಪರೆ ಕೂಟ, ರಾಮನಗರದ ಸಾಂಸ್ಕೃತಿಕ ಪರಂಪರೆಯ ಸಂಶೋಧನಾ ಕೇಂದ್ರ, ಬೆಂಗಳೂರು ಹಿಸ್ಟೊರಿಯನ್ಸ್ ಸೊಸೈಟಿ ಹಾಗೂ ಇತಿಹಾಸ ದರ್ಪಣದ ಸಹಯೋಗದಲ್ಲಿ ನಡೆದ ಅಂತಾರಾಷ್ಟ್ರೀಯ ವಸ್ತು ಸಂಗ್ರಹಾಲಯ ದಿನ ಹಾಗೂ ‘ದೇವದಾಸಿ ಮತ್ತು ಜೋಗತಿ ಪರಂಪರೆ’ ವಿಚಾರ ಸಂಕಿರಣ ಉದ್ಘಾಟಿಸಿ ಅವರು ಮಾತನಾಡಿದರು.

‘ಸಾಹಿತ್ಯ ಹಾಗೂ ಸಂಗೀತ ನಿಮ್ಮೊಳಗಿನ ಭಾವನೆಗಳನ್ನು ಸ್ಫುರಿಸುವಾಗ ಅವರು ಯಾರು? ಯಾವ ಜಾತಿ ಎಂಬುದನ್ನು ನೋಡುವುದಿಲ್ಲ’ ಎಂದು ಹೇಳಿದರು.

‘ಇಂದು ಸಾಕಷ್ಟು ಪರಂಪರೆಗಳು ವಸ್ತು ಸಂಗ್ರಹಾಲಯ ಸೇರಿವೆ. ಹಳ್ಳಿಗಳಲ್ಲಿದ್ದ ಕಲೆಯ ಬೇರುಗಳು ಮುಂದಿನ ತಲೆಮಾರಿಗೆ ಸಿಗುವುದು ಹೇಗೆ? ಮುಂದಿನ ತಲೆಮಾರಿಗೆ ಕಲೆಗಳು, ಪರಂಪರೆಗಳು ಕಂಡುಬರುವುದೇ ವಸ್ತು ಸಂಗ್ರಹಾಲಯಗಳಲ್ಲಿ’ ಎಂದು ಅಭಿಪ್ರಾಯಪಟ್ಟರು.

‘ಸಮಾಜ ಸಾಂಸ್ಕೃತಿಕ ನೆಲೆಗಟ್ಟನ್ನು ಭದ್ರಪಡಿಸಿಕೊಳ್ಳದೇ ಹೋದರೆ ಛಿದ್ರ ಛಿದ್ರವಾಗಿ ಹೋಗಲಿದೆ. ಯಾವುದೇ ಕಲಾ ಪ್ರಕಾರಗಳು ಎಲ್ಲರನ್ನೂ ಒಳಗೊಳ್ಳುತ್ತವೆ. ನಾಳೆಯ ಬಗ್ಗೆ ಪ್ರೀತಿ ಉಂಟು ಮಾಡುತ್ತದೆ’ ಎಂದರು.

ಜಾನಪದ ಕಲಾವಿದೆ ಮಂಜಮ್ಮ ಜೋಗತಿ ಮಾತನಾಡಿ, ‘ದೇವರು ದೇವಾಲಯ, ಮಸೀದಿ, ಚರ್ಚ್‌ಗಳಲ್ಲಿ ಇಲ್ಲ. ನಾವು ಮಾಡುವ ಕೆಲಸಗಳಲ್ಲಿ ದೇವರಿದ್ದಾನೆ’ ಎಂದರು.

‘ದೇವದಾಸಿ ಸಂಪ್ರದಾಯ: ದೇವರ ಹೆಸರಿನಲ್ಲಿ ದಬ್ಬಾಳಿಕೆ’ ವಿಷಯ ಕುರಿತು ಪ್ರೊ.ಎಂ.ಜಮುನಾ, ‘ದೇವಾಲಯದ ವಾಸ್ತುಶಿಲ್ಪದ ವಿಕಾಸದಲ್ಲಿ ದೇವದಾಸಿಯರು’ ಕುರಿತು ರೇಖಾರಾವ್ ಉಪನ್ಯಾಸ ನೀಡಿದರು.

ಕೆ.ಎಲ್.ಇ ಕಾನೂನು ಮಹಾವಿದ್ಯಾಲಯದ ಪ್ರಾಂಶುಪಾಲ ಪ್ರೊ.ಜೆ.ಎಂ. ಮಲ್ಲಿಕಾರ್ಜುನಯ್ಯ ಅಧ್ಯಕ್ಷತೆ ವಹಿಸಿದ್ದರು. ಮಂಜಮ್ಮ ಜೋಗತಿ ಅವರ ಜೀವನಾಧಾರಿತ ಏಕವ್ಯಕ್ತಿ ನಾಟಕ ‘ಮಾತಾ’ ಪ್ರದರ್ಶನಗೊಂಡಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT