ಬುಧವಾರ, ಜುಲೈ 6, 2022
22 °C
ಮಹಿಳಾ ದಿನದ ಅಂಗವಾಗಿ ಆಯೋಜನೆ * ಪ್ರಜಾವಾಣಿ–ಡೆಕ್ಕನ್‌ ಹೆರಾಲ್ಡ್‌ ಸಹಯೋಗ

ಸೈಟಿಕೇರ್‌ನಿಂದ ಜಾಗೃತಿ ಓಟ ಮಾ.1ಕ್ಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಅಂತರರಾಷ್ಟ್ರೀಯ ಮಹಿಳಾ ದಿನದ ಅಂಗವಾಗಿ ‘ಸೈಟಿಕೇರ್‌’ ಸಂಸ್ಥೆಯು ಮಾರ್ಚ್‌ 1ರಂದು ಜಾಗೃತಿ ಓಟ ಮತ್ತು ಕುಟುಂಬ ರಿಲೇಯನ್ನು ಆಯೋಜಿಸಿದೆ. ‘ಪ್ರಜಾವಾಣಿ’ ಮತ್ತು ‘ಡೆಕ್ಕನ್‌ ಹೆರಾಲ್ಡ್‌’ ಸಹಯೋಗದಲ್ಲಿ ಹಮ್ಮಿಕೊಂಡಿರುವ ಈ ಓಟದಲ್ಲಿ 2 ಸಾವಿರಕ್ಕೂ ಹೆಚ್ಚು ಜನ ಭಾಗವಹಿಸಲಿದ್ದಾರೆ. 

ಸೈಟಿಕೇರ್‌ ಸತತ 11ನೇ ವರ್ಷ ಈ ‘ಕಾಂಟಾರ್ಸ್‌’ ಓಟದ ಕಾರ್ಯಕ್ರಮ ಹಮ್ಮಿಕೊಳ್ಳುತ್ತಿದ್ದು, ಎಂಬೆಸ್ಸಿ ಮಾನ್ಯತಾ ಬಿಸಿನೆಸ್‌ ಪಾರ್ಕ್‌ ಹತ್ತಿರದಿಂದ ಅಂದು ಬೆಳಿಗ್ಗೆ 6ಕ್ಕೆ ಓಟ ಪ್ರಾರಂಭವಾಗಲಿದೆ. ಅಶಕ್ತ ಮಕ್ಕಳ ಪಾಲನೆ, ಪೋಷಣೆ ಮತ್ತು ಶಿಕ್ಷಣ ನೀಡಲು ಶ್ರಮಿಸುತ್ತಿರುವ ‘ಸೃಷ್ಟಿ’ ವಿಶೇಷ ಸಂಸ್ಥೆಗೆ ಬೆಂಬಲ ಸೂಚಿಸುವ ಸಲುವಾಗಿ ಈ ಕಾರ್ಯಕ್ರಮ ಆಯೋಜಿಸಲಾಗಿದೆ. ಅಲ್ಲದೆ, ‘ನಡಿಗೆಯಿಂದ ಉತ್ತಮ ಆರೋಗ್ಯ–ಸ್ವಾಸ್ಥ್ಯ ಜೀವನ’ ಸಂದೇಶವನ್ನು ಸಾರುವ ಉದ್ದೇಶವನ್ನು ಈ ಕಾರ್ಯಕ್ರಮ ಹೊಂದಿದೆ.

ಈ ‘ಓಟ’ದಲ್ಲಿ ಕಳೆದ ಐದು ಆವೃತ್ತಿಗಳಲ್ಲಿ ₹25 ಲಕ್ಷ ದೇಣಿಗೆ ಸಂಗ್ರಹಿಸಿ, ‘ಸೃಷ್ಟಿ’ ಸಂಸ್ಥೆಗೆ ನೀಡಲಾಗಿದೆ. ವಿಶೇಷ ಒಲಿಂಪಿಕ್ಸ್‌ನಲ್ಲಿ ಭಾಗವಹಿಸುವ ಮಕ್ಕಳಿಗೆ ತರಬೇತಿ ನೀಡಲು ಮತ್ತು ಸಂಸ್ಥೆಗೆ ವಾಹನ ಖರೀದಿಸಲು ಹಾಗೂ ಸಭೆ ಆಯೋಜಿಸಲು ಈ ಮೊತ್ತವನ್ನು ಬಳಸಲಾಗಿದೆ. 

2ಕೆ, 5ಕೆ, 10ಕೆ ಮತ್ತು 10ಕೆ (ಕುಟುಂಬ ರಿಲೇ) ವಿಭಾಗಗಳಲ್ಲಿ ಓಟ ನಡೆಯಲಿದೆ. ಮಹಿಳೆಯರು, ಪುರುಷರು ಮತ್ತು ಮಕ್ಕಳು ಪಾಲ್ಗೊಳ್ಳಬಹುದು. 

ಆಸಕ್ತರು, ಇದೇ 26ರೊಳಗೆ ಹೆಸರು ನೋಂದಾಯಿಸಿಕೊಳ್ಳಬೇಕು. ವಿವರಗಳಿಗೆ– www.eventzalley.com

ಸಂಪರ್ಕ: 96066–22006

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು