ಶನಿವಾರ, 3 ಜೂನ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಡುಗೆ ಅನಿಲ ರಿಫಿಲ್ಲಿಂಗ್ ದಂಧೆ: ಗೋಗ್ಯಾಸ್ ಏಜೆನ್ಸಿ ಮಾಲೀಕನ ಸೆರೆ

Last Updated 21 ಮಾರ್ಚ್ 2023, 22:21 IST
ಅಕ್ಷರ ಗಾತ್ರ

ಬೆಂಗಳೂರು: ಅಡುಗೆ ಅನಿಲ ರಿಫಿಲ್ಲಿಂಗ್ ದಂಧೆ ನಡೆಸುತ್ತಿದ್ದ ಆರೋಪದಡಿ ಗೋ ಗ್ಯಾಸ್ ಏಜೆನ್ಸಿ ಮಾಲೀಕ ಸೇರಿ ಐವರನ್ನು ಸಿಸಿಬಿ ಪೊಲೀಸರು ಮಂಗಳವಾರ ಬಂಧಿಸಿದ್ದಾರೆ.

‘ಬಿಟಿಎಂ ಎರಡನೇ ಹಂತದ ನಿವಾಸಿ ಎಂ.ಸುಮಂತ್ (32), ದೀಪಕ್ (30), ರಾಜು (21), ಪ್ರಕಾಶ್ (21) ಹಾಗೂ ರಿತಿಕ್ (19) ಬಂಧಿತರು. ಇವರಿಂದ ₹ 35 ಲಕ್ಷ ಮೌಲ್ಯದ 694 ಸಿಲಿಂಡರ್ ಹಾಗೂ 75 ರಿಫಿಲ್ಲಿಂಗ್ ರಾಡ್‌ಗಳನ್ನು ಜಪ್ತಿ ಮಾಡಲಾಗಿದೆ’ ಎಂದು ಸಿಸಿಬಿ ಜಂಟಿ ಕಮಿಷನರ್ ಎಸ್‌.ಡಿ. ಶರಣಪ್ಪ ತಿಳಿಸಿದರು.

‘ಅಕ್ರಮ ರಿಫಿಲ್ಲಿಂಗ್ ದಂಧೆ ವಿರುದ್ಧ ಹಲವು ದಿನಗಳಿಂದ ಕಾರ್ಯಾಚರಣೆ ನಡೆಸಲಾಗುತ್ತಿದೆ. ಗೋಗ್ಯಾಸ್ ಏಜೆನ್ಸಿ ಹೊಂದಿದ್ದ ಸುಮಂತ್, ವಾಣಿಜ್ಯ ಹಾಗೂ ಗೃಹೋಪಯೋಗಿ ಸಿಲಿಂಡರ್‌ಗಳನ್ನು ರಿಫಿಲ್ಲಿಂಗ್ ಮಾಡುತ್ತಿದ್ದ. ಇಂಡೇನ್, ಭಾರತ್ ಹಾಗೂ ಎಚ್‌.ಪಿ ಕಂಪನಿ ದೊಡ್ಡ ಸಿಲಿಂಡರ್‌ಗಳನ್ನು ಬಳಸಿಕೊಂಡು ಚಿಕ್ಕ ಸಿಲಿಂಡರ್‌ಗಳಿಗೆ ಅನಿಲ ತುಂಬುತ್ತಿದ್ದ. ಇದಕ್ಕೆಂದು ಕೆಲಸಗಾರರನ್ನು ನಿಯೋಜಿಸಿಕೊಂಡಿದ್ದ.’

‘ಕೃತ್ಯದ ಬಗ್ಗೆ ಮಾಹಿತಿ ದೊರೆಯುತ್ತಿದ್ದಂತೆ ಬಿಟಿಎಂ 2ನೇ ಹಂತದಲ್ಲಿರುವ ಶೆಡ್ ಮೇಲೆ ದಾಳಿ ಮಾಡಿ ಆರೋಪಿಗಳನ್ನು ಬಂಧಿಸಲಾಗಿದೆ’ ಎಂದು ಹೇಳಿದರು.

‘ರಿಫಿಲ್ಲಿಂಗ್ ದಂಧೆಯಿಂದಲೇ ಆರೋಪಿ ಹೆಚ್ಚು ಹಣ ಸಂಪಾದನೆ ಮಾಡುತ್ತಿದ್ದ. ಇಂಡೇನ್, ಭಾರತ್ ಹಾಗೂ ಎಚ್‌.ಪಿ ಕಂಪನಿಯ 75 ಸಿಲಿಂಡರ್‌ಗಳು ಶೆಡ್‌ನಲ್ಲಿ ಸಿಕ್ಕಿವೆ. ಉಳಿದಂತೆ, ಗೋಗ್ಯಾಸ್ ಸಿಲಿಂಡರ್‌ಗಳನ್ನೂ ಜಪ್ತಿ ಮಾಡಲಾಗಿದೆ’ ಎಂದು ತಿಳಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT