ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮನೆಯಿಂದ ಹೊರಗಟ್ಟಿದರು!

Last Updated 23 ಮಾರ್ಚ್ 2020, 3:33 IST
ಅಕ್ಷರ ಗಾತ್ರ

ಕೆಂಗೇರಿ:ವಿದೇಶದಿಂದ ಬಂದ ವ್ಯಕ್ತಿಗೆ ಕೊರೊನಾ ಸೋಂಕು ತಗುಲಿದೆ ಎಂದು ಅನುಮಾನಿಸಿ, ಅವರನ್ನು ಮನೆಯಿಂದ ಹೊರಗಟ್ಟಿದ ಘಟನೆ ಭಾನುವಾರ ನಡೆದಿದೆ.

ಕೆಂಗೇರಿ ಉಪನಗರದ ನಿವಾಸಿ ಯೊಬ್ಬರು ಕಳೆದ ತಿಂಗಳು ಕಾರ್ಯ ನಿಮಿತ್ತಬಹರೇನ್‌ಗೆ ತೆರಳಿದ್ದರು. ಇದೇ ಮಾ.21ರ ಮಧ್ಯಾಹ್ನ ಬೆಂಗಳೂರಿಗೆ ಬಂದ ಅವರನ್ನು ದೇವನಹಳ್ಳಿಯ ಆಕಾಶ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ತಪಾಸಣೆ ನಡೆಸಿದ ವೈದ್ಯರು, ಸೋಂಕು ಶಂಕಿತ ಎಂದು ದೃಢೀಕರಿಸಿ 14 ದಿನಗಳ ಕಾಲ ಮನೆಯಲ್ಲಿಯೇ ನಿಗಾ ವಹಿಸುವಂತೆ ಸೂಚಿಸಿದ್ದರು.

ರೋಗ ಲಕ್ಷಣ ಕಂಡು ಬಂದಲ್ಲಿ ಕೂಡಲೇ ಆಸ್ಪತ್ರೆಗೆ ದಾಖಲಾಗು ವಂತೆಯೂ ಹೇಳಿದ್ದರು. ತದನಂತರ ಆಸ್ಪತ್ರೆಯಿಂದ ತೆರಳಿದ ಅವರು ಪೋಷಕರಿದ್ದ ತಮ್ಮ ನಿವಾಸಕ್ಕೆ ಅಂದು ರಾತ್ರಿ ಸುಮಾರು 7.30ಕ್ಕೆ ವಾಪಸ್ಸಾ
ಗಿದ್ದರು. ಈ ವ್ಯಕ್ತಿಗೆ ಕೊರೊನಾ ವೈರಸ್ ಇದೆ ಎಂದು ಅನುಮಾನಿಸಿದ ಅಪಾರ್ಟ್‌ಮೆಂಟ್‌ ನಿವಾಸಿಗಳು ವಿದೇಶದಿಂದ ಬಂದು ಈ ಕೂಡಲೇ ಇಲ್ಲಿ ನೆಲೆಸುವುದು ಸೂಕ್ತವಲ್ಲ. ಆಸ್ಪತ್ರೆಗೆ ದಾಖಲಾಗಿ. ಇಲ್ಲವಾದಲ್ಲಿ ಮನೆಯನ್ನು ಬಿಟ್ಟು ಹೊರನಡೆಯಿರಿ ಎಂದು ಒತ್ತಡ ಹೇರಿದ್ದಾರೆ.

ವ್ಯಕ್ತಿಯು ಯಾರ ಮಾತನ್ನು ಕೇಳದಿದ್ದಾಗ ಸಿಟ್ಟಿಗೆದ್ದ ಅಪಾರ್ಟ್‌ ಮೆಂಟ್‌ ಜನ, ಒತ್ತಾಯಪೂರ್ವಕವಾಗಿ ವ್ಯಕ್ತಿಯನ್ನು ಹೊರಗಟ್ಟಿದ್ದಾರೆ.ಶಂಕಿತ ವ್ಯಕ್ತಿ ಇದೀಗ ತಮ್ಮ ಸಂಬಂಧಿಕರ ಖಾಲಿ ಮನೆಯಲ್ಲಿ ಒಬ್ಬಂಟಿಯಾಗಿ ವಾಸವಾ ಗಿದ್ದಾರೆ ಎಂದು ತಿಳಿದು ಬಂದಿದೆ.

‘ಅಪಾರ್ಟ್ ಮೆಂಟ್ ಮಂದಿ ಶಂಕೆ ವ್ಯಕ್ತ ಪಡಿಸಿ ವಿದೇಶದಿಂದ ಬಂದ ವ್ಯಕ್ತಿಗೆ ಪ್ರವೇಶ ನಿರ್ಬಂಧಿಸಿದ್ದಾರೆ. ಶಂಕಿತ ವ್ಯಕ್ತಿಯು ಈಗಾಗಲೇ ತಪಾಸಣೆಗೆ ಒಳಗಾಗಿದ್ದು ರೋಗ ಲಕ್ಷಣ ಕಂಡು ಬಂದಿಲ್ಲ. ಅಪಾರ್ಟ್ ಮೆಂಟ್ ಮಂದಿ ಗಾಬರಿಯಾಗುವ ಅಗತ್ಯವಿಲ್ಲ’ ಎಂದು ಕೆಂಗೇರಿ ಬಿಬಿಎಂಪಿ ಸದಸ್ಯ ವಿ.ವಿ.ಸತ್ಯನಾರಾಯಣ ತಿಳಿಸಿದ್ದಾರೆ.

‘ವಿದೇಶದಿಂದ ವಾಪಾಸಾದ ಬಳಿಕ ತಪಾಸಣೆಗೆ ಒಳಗಾಗಿದ್ದೆ. ಈ ವೇಳೆ ನನ್ನ ದೇಹದ ಮೇಲೆ ಮೂರು ಮುದ್ರೆ ಹಾಕಲಾಗಿತ್ತು. ಇದನ್ನು ಕಂಡು ಆತಂಕಗೊಂಡಿದ್ದಅಪಾರ್ಟ್‌ಮೆಂಟ್‌ ನಿವಾಸಿಗಳು ನನ್ನ ಮೇಲೆ ಶಂಕೆ ವ್ಯಕ್ತ ಪಡಿಸುತ್ತಿದ್ದಾರೆ. ವೈದ್ಯರು ಸೂಚನೆ ಮೇರೆಗೆ ವಿದೇಶದಿಂದ ವಾಪಸಾದ ನಂತರ ನಾನು ನನ್ನ ಪೋಷಕರೊಂದಿಗೂ ಮಾತನಾಡಿಲ್ಲ. ನನಗೆ ರೋಗದ ಲಕ್ಷಣ ಕಂಡು ಬಂದರೆ ನಾನೇ ಆಸ್ಪತ್ರೆಗೆ ಖುದ್ದು ದಾಖಲಾಗುತ್ತೇನೆ. ನನ್ನೊಂದಿಗೆ ಆಗಮಿಸಿದ ನನ್ನ ಸಹದ್ಯೋಗಿ
ಯೊಬ್ಬನಿಗೂ ಇಂತಹುದೇ ಪ್ರಸಂಗ ಎದುರಾಗಿದೆ. ಏನು ಮಾಡು
ವುದು ತಿಳಿಯದಾಗಿದೆ’ ಎಂದು ಸೋಂಕು ಶಂಕಿತ ವ್ಯಕ್ತಿ ಅಳಲು ತೋಡಿಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT