ಬೆಂಗಳೂರು: ಕೊರೊನಾ ಕುರಿತು ಜನಜಾಗೃತಿ ಮೂಡಿಸಲು ರಾಜ್ಯ ಸರ್ಕಾರ ರಚಿಸಿರುವ ಸೋಷಿಯಲ್ ಮೀಡಿಯಾ ಕಾರ್ಯಪಡೆ 24X7 ಸಕ್ರಿಯವಾಗಿದ್ದು, ವಾಟ್ಸ್ಆ್ಯಪ್, ಫೇಸ್‌ಬುಕ್, ಟ್ವಿಟರ್ ಮೂಲಕ ನಿತ್ಯ 25 ಲಕ್ಷಕ್ಕೂ ಹೆಚ್ಚು ಜನರ ಮೊಬೈಲ್ ತಲುಪುತ್ತಿದೆ!

ಬಿಎಂಟಿಸಿ ವ್ಯವಸ್ಥಾಪಕ ನಿರ್ದೇಶಕಿ ಸಿ. ಶಿಖಾ ನೇತೃತ್ವದ ಈ ತಂಡದ ಬೆನ್ನಿಗೆ ಆರೋಗ್ಯ, ಡಿಐಪಿಆರ್, ಕೆಎಸ್‌ಆರ್‌ಟಿಸಿ, ಬಿಎಂಟಿಸಿ, ಬಿಟಿಪಿ, ಬಿಬಿಎಂಪಿ, ಕಾರ್ಮಿಕ, ಆರ್‌ಡಿಪಿಆರ್ ಇಲಾಖೆಗಳಿದ್ದು, ಚುಕ್ಕಿ ಟಾಕೀಸ್‌ನ ಸುಷ್ಮಾ, ದಿಶಾ ಕಮ್ಯುನಿಕೇಷನ್‌ನ
ಗೀತಾ ಚವ್ಹಾಣ‌್, ಸೈಡ್ ಅಪ್ ತಂಡದ ವಿನೋದ್, ಸನ್ನಿ, ರೆಬೆಕ್ಕಾದ ಬಾಲಸುಬ್ರಹ್ಮಣ್ಯಮ್ ಅವರನ್ನೊಳಗೊಂಡ ಕ್ರಿಯೇಟಿವ್ ತಂಡವಿದೆ.

ರಾಜ್ಯ– ಕೇಂದ್ರ ಸರ್ಕಾರಗಳ ಸುತ್ತೋಲೆ, ಮಾರ್ಗಸೂಚಿ, ಎಚ್ಚರಿಕೆ ಹಾಗೂ ಜಾಗೃತಿ ಮಾಹಿತಿಗಳನ್ನು ಕನ್ನಡವೂ ಸೇರಿದಂತೆ ವಿವಿಧ ಭಾಷೆಗಳಿಗೆ ಅನುವಾದಿಸಿ, ದೃಶ್ಯ– ಶ್ರಾವ್ಯ ರೂಪ ನೀಡಿ ಸಾಮಾಜಿಕ ಜಾಲತಾಣಗಳ ಮೂಲಕ ಹರಿಯಬಿಡುತ್ತಿದೆ.

ಎಲ್ಲ 30 ಜಿಲ್ಲೆಗಳ ಜಿಲ್ಲಾಧಿಕಾರಿಗಳಿರುವ, 6 ಸಾವಿರಕ್ಕೂ ಹೆಚ್ಚು ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಿರುವ, ನೌಕರರ ಸಂಘಟನೆಗಳು– ಸಂಸ್ಥೆಗಳ ಸದಸ್ಯರಿರುವ ಹಾಗೂ ವಿವಿಧ ಇಲಾಖೆಗಳ ವಾಟ್ಸ್‌ಆ್ಯಪ್ ಗ್ರೂಪ್‌ಗಳಲ್ಲಿ ಈ ತುಣುಕುಗಳನ್ನು ವೈರಲ್ ಮಾಡಲಾಗುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.