ಶನಿವಾರ, ಜುಲೈ 2, 2022
22 °C

ಸಂಬಂಧಿ ಮನೆಯಲ್ಲಿ ಕಳ್ಳತನ: ಯುವಕ ಬಂಧನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಸಂಬಂಧಿಕರ ಮನೆಯಲ್ಲಿ ಚಿನ್ನಾಭರಣ ಕಳ್ಳತನ ಮಾಡಿದ್ದ ಆರೋಪದಡಿ ಅಜಿತ್ (26) ಎಂಬುವರನ್ನು ಬ್ಯಾಟರಾಯನಪುರ ಠಾಣೆ ಪೊಲೀಸರು ಬಂಧಿಸಿದ್ದಾರೆ.

‘ಮಾದನಾಯಕನಹಳ್ಳಿ ಬಸವೇಶ್ವರ ಬಡಾವಣೆ ನಿವಾಸಿ ಅಜಿತ್, ಜೂಜಾಡುತ್ತಿದ್ದ. ಅದಕ್ಕೆ ಅಗತ್ಯವಿದ್ದ ಹಣ ಹೊಂದಿಸಲು ಚಿನ್ನಾಭರಣ ಕದ್ದಿದ್ದ. ಈತನಿಂದ ₹ 31 ಲಕ್ಷ ಮೌಲ್ಯದ 613 ಗ್ರಾಂ ಚಿನ್ನಾಭರಣ ಜಪ್ತಿ ಮಾಡಲಾಗಿದೆ’ ಎಂದು ಪೊಲೀಸರು ಹೇಳಿದರು.

‘ಬ್ಯಾಟರಾಯನಪುರ ನಿವಾಸಿಯೊಬ್ಬರ ಸಂಬಂಧಿ ಆಗಿದ್ದ ಅಜಿತ್, ಆಗಾಗ ಮನೆಗೆ ಬಂದು ಹೋಗುತ್ತಿದ್ದ. ಅದೇ ಸಂದರ್ಭದಲ್ಲೇ ಬೀರುವಿನಲ್ಲಿಟ್ಟಿದ್ದ ಚಿನ್ನಾಭರಣ ಕದ್ದೊಯ್ದಿದ್ದ. ಅವುಗಳನ್ನು ಫೈನಾನ್ಸ್ ಕಂಪನಿಗಳಲ್ಲಿ ಗಿರವಿಗಿಟ್ಟು ಹಣ ಪಡೆದುಕೊಂಡಿದ್ದ. ಬಂದ ಹಣವನ್ನು ಜೂಜಾಟದಲ್ಲಿ ಕಳೆದುಕೊಂಡಿದ್ದ.’

‘ಕಳ್ಳತನ ಗಮನಕ್ಕೆ ಬರುತ್ತಿದ್ದಂತೆ ನಿವಾಸಿ ದೂರು ನೀಡಿದ್ದರು. ಅಜಿತ್‌ನನ್ನು ವಶಕ್ಕೆ ಪಡೆದು ವಿಚಾರಿಸಿದಾಗ, ತಪ್ಪೊಪ್ಪಿಕೊಂಡ’ ಎಂದೂ ತಿಳಿಸಿದರು.

ಜೀವ ಬೆದರಿಕೆ: ‘ಅಜಿತ್‌ ಮೇಲೆ ಅನುಮಾನಪಟ್ಟಿದ್ದ ಸಂಬಂಧಿ, ಚಿನ್ನಾಭರಣ ವಾಪಸು ನೀಡುವಂತೆ ಹೇಳಿದ್ದರು. ಆಭರಣ ನೀಡುವುದಿಲ್ಲವೆಂದು ಹೇಳಿದ್ದ ಆರೋಪಿ, ಸಂಬಂಧಿಗೆ ಜೀವ ಬೆದರಿಕೆ ಹಾಕಿದ್ದರು’ ಎಂದು ಪೊಲೀಸರು ಹೇಳಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು