ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರತಿ ರಸ್ತೆಯಲ್ಲೂ ಸೈರನ್; ದಿನಕ್ಕೆ 1,300 ಆಂಬುಲೆನ್ಸ್ ಸಂಚಾರ

Last Updated 24 ಏಪ್ರಿಲ್ 2021, 20:31 IST
ಅಕ್ಷರ ಗಾತ್ರ

ಬೆಂಗಳೂರು: ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚುತ್ತಿರುವುದರಿಂದ ನಗರದಲ್ಲಿ ಆಂಬುಲೆನ್ಸ್‌ಗಳ ಓಡಾಟ ಜಾಸ್ತಿಯಾಗಿದ್ದು, ಪ್ರತಿ ರಸ್ತೆಯಲ್ಲೂ ಸೈರನ್‌ ಸದ್ದು ಕೇಳುತ್ತಿದೆ.

ರೋಗಿಗಳನ್ನು ಮನೆಯಿಂದ ಆಸ್ಪತ್ರೆಗೆ ಹಾಗೂ ಆಸ್ಪತ್ರೆಯಿಂದ ಆಸ್ಪತ್ರೆಗೆ ಆಂಬುಲೆನ್ಸ್‌ಗಳಲ್ಲಿ ಕರೆದೊಯ್ಯಲಾಗುತ್ತಿದೆ. ಕೋವಿಡ್‌ನಿಂದ ಸತ್ತವರ ಮೃತದೇಹಗಳನ್ನೂ ಆಂಬುಲೆನ್ಸ್‌ಗಳಲ್ಲೇ ಚಿತಾಗಾರಗಳಿಗೆ ಸಾಗಿಸಲಾಗುತ್ತಿದೆ. ಚಾಲಕರು ಹಾಗೂ ಸಹಾಯಕರು, ದಿನದ 24 ಗಂಟೆಯೂ ಕೆಲಸ ಮಾಡುವ ಸ್ಥಿತಿ ನಿರ್ಮಾಣವಾಗಿದೆ.

ಪ್ರತಿಯೊಂದು ಆಂಬುಲೆನ್ಸ್‌ ಸಂಚಾರಕ್ಕೂ ಪೊಲೀಸರು ಅನುಕೂಲ ಮಾಡಿಕೊಡುತ್ತಿದ್ದಾರೆ. ವೃತ್ತ ಹಾಗೂ ಪ್ರಮುಖ ರಸ್ತೆಗಳಲ್ಲಿ ಆಂಬುಲೆನ್ಸ್‌ಗಳ ಸಂಚಾರಕ್ಕೆ ಬೇರೆ ವಾಹನಗಳಿಂದ ಅಡ್ಡಿಯಾಗದಂತೆ ನೋಡಿಕೊಳ್ಳುತ್ತಿದ್ದಾರೆ.

ಸಂಚಾರ ಪೊಲೀಸರ ಮಾಹಿತಿ ಪ್ರಕಾರ, ಸದ್ಯ ದಿನಕ್ಕೆ ಸುಮಾರು 1,250ರಿಂದ 1,300 ಆಂಬುಲೆನ್ಸ್‌ಗಳು ನಗರದಲ್ಲಿ ಸಂಚರಿಸುತ್ತಿದೆ.

‘ಐದು ತಿಂಗಳ ಹಿಂದೆ ನಿತ್ಯ 800ರಿಂದ 850 ಆಂಬುಲೆನ್ಸ್‌ಗಳು ನಗರದಲ್ಲಿ ಸಂಚರಿಸುತ್ತಿದ್ದವು. ಇದೀಗ ಕೊರೊನಾ ಸೋಂಕಿತರು ಹೆಚ್ಚಾಗಿದ್ದು, ಆಂಬುಲೆನ್ಸ್‌ಗಳ ಸಂಖ್ಯೆ ಸುಮಾರು 1,300ಕ್ಕೆ ಹೆಚ್ಚಳವಾಗಿದೆ’ ಎಂದು ಸಂಚಾರ ವಿಭಾಗದ ಪೊಲೀಸ್ ಅಧಿಕಾರಿಯೊಬ್ಬರು ಹೇಳಿದರು.

'ನಗರದ ಪ್ರಮುಖ ರಸ್ತೆಗಳು, ಮೈದಾನಗಳು, ಆಸ್ಪತ್ರೆಗಳ ಎದುರು ಆಂಬುಲೆನ್ಸ್‌ಗಳನ್ನು ನಿಲುಗಡೆ ಮಾಡಲಾಗುತ್ತಿದೆ’ ಎಂದರು.

ಕಳೆದ ವರ್ಷ ಕೋವಿಡ್‌ ಪ್ರಕರಣಗಳು ತಾರಕಕ್ಕೇರಿದ್ದಾಗ ಟೆಂಪೊ ಟ್ರಾವೆಲರ್‌ ವಾಹನಗಳನ್ನೂ ತಾತ್ಕಾಲಿಕ ಆಂಬುಲೆನ್ಸ್‌ಗಳನ್ನಾಗಿ ಮಾರ್ಪಡಿಸಿ ಬಳಸಲಾಗಿತ್ತು. ಈ ಸಲವೂ ಅದೇ ರೀತಿ ಮಾಡಲಾಗುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT