ಮಂಗಳವಾರ, 30 ಮೇ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊರೊನಾ ಸೋಂಕಿತ ಗರ್ಭಿಣಿಗೆ 24 ವಾರಗಳಲ್ಲೇ ಮಗು ಜನನ: 500 ಗ್ರಾಂ ತೂಕ

Last Updated 24 ಫೆಬ್ರವರಿ 2022, 2:00 IST
ಅಕ್ಷರ ಗಾತ್ರ

ಬೆಂಗಳೂರು: ಕೊರೊನಾ ಸೋಂಕಿತರಾಗಿದ್ದ ಗರ್ಭಿಣಿಯೊಬ್ಬರು 24 ವಾರಗಳಿಗೆ ಮಗುವಿಗೆ ಜನ್ಮನೀಡಿದ್ದು, 500 ಗ್ರಾಂ ತೂಕದ ಮಗು ಹಾಗೂ ತಾಯಿಯನ್ನುಆಸ್ಟರ್ ಸಿಎಂಐ ಆಸ್ಪತ್ರೆ ವೈದ್ಯರು ರಕ್ಷಿಸಿದ್ದಾರೆ.

ಇಲ್ಲಿನ ರೇಖಾ ರಮೇಶ್ ಎನ್ನುವವರು ಈಮೊದಲುಹಲವು ಬಾರಿ ಗರ್ಭಪಾತಕ್ಕೆಒಳಗಾಗಿದ್ದರು. ಅವರು ಐವಿಎಫ್‌ ಚಿಕಿತ್ಸೆಯ ಮೂಲಕ ಗರ್ಭಧರಿಸಿದ್ದರು. ಕೆಲ ದಿನಗಳ ಹಿಂದೆ ಕೋವಿಡ್ ಪೀಡಿತರಾಗಿದ್ದ ಅವರಿಗೆ ಸಂಕೀರ್ಣ ಅನಾರೋಗ್ಯ ಸಮಸ್ಯೆಗಳು ಕಾಣಿಸಿಕೊಂಡಿದ್ದವು. ಆಸ್ಟರ್ ಸಿಎಂಐ ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ಒದಗಿಸಲಾಗಿತ್ತು. ತೀವ್ರ ನಿಗಾ ಘಟಕಕ್ಕೆ (ಐಸಿಯು) ದಾಖಲಾಗಿದ್ದ ಅವರ ಜೀವಕ್ಕೆ ಅಪಾಯ ತಪ್ಪಿಸಲು ವೈದರು ಶಸ್ತ್ರಚಿಕಿತ್ಸೆಯ ಮೂಲಕ ಮಗುವನ್ನು ಹೊರತೆಗೆದಿದ್ದಾರೆ.

‘ಕೊರೊನಾ ಸೋಂಕಿನಿಂದ ಅವರ ಶ್ವಾಸಕೋಶಕ್ಕೆ ಹಾನಿಯಾಗಿತ್ತು. ಹೀಗಾಗಿ,ಅವರನ್ನು ವೆಂಟಿಲೇಟರ್‌ನಲ್ಲಿ ಇರಿಸಬೇಕಾಯಿತು ಕೋವಿಡ್ ಐಸಿಯು ತಂಡದನೆರವಿನೊಂದಿಗೆ ಶಸ್ತ್ರಚಿಕಿತ್ಸೆಯನ್ನುಯಶಸ್ವಿಯಾಗಿನಡೆಸಿ, ಆರೈಕೆ ಮಾಡಲಾಯಿತು. ಮಗು ಅವಧಿಪೂರ್ವ ಜನಿಸಿದ್ದರಿಂದ 500 ಗ್ರಾಂ ತೂಕ ಹೊಂದಿತ್ತು. ಮಗು ಹಾಗೂ ತಾಯಿ ಆರೋಗ್ಯದಿಂದ ಇದ್ದಾರೆ’ ಎಂದುಆಸ್ಪತ್ರೆಯ ಪ್ರಸೂತಿ ಮತ್ತು ಸ್ತ್ರೀರೋಗ ಸಲಹಾತಜ್ಞ ಡಾ. ಚೇತನಾ ವಿ. ತಿಳಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT