ಮಂಗಳವಾರ, ಜೂನ್ 15, 2021
22 °C
ಸುರಕ್ಷತಾ ಸಾಮಗ್ರಿ, ಜೀವನ ಭದ್ರತೆ ಒದಗಿಸುವಂತೆ ಒತ್ತಾಯಿಸಿ ಪೌರಕಾರ್ಮಿಕರ ಪ್ರತಿಭಟನೆ

ಬೆಂಗಳೂರು: ಪೌರಕಾರ್ಮಿಕ ಮಹಿಳೆ ಕೋವಿಡ್‌ನಿಂದ ಸಾವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಬಾಣಸವಾಡಿ ವಾರ್ಡ್‌ನ ಪೌರಕಾರ್ಮಿಕ ಮಹಿಳೆ ಸುಶೀಲಮ್ಮ (52) ಅವರು ಕೋವಿಡ್‌ನಿಂದಾಗಿ ಬುಧವಾರ ರಾತ್ರಿ ಕೊನೆಯುಸಿರೆಳೆದಿದ್ದಾರೆ. ಇದರ ಬೆನ್ನಲ್ಲೇ, ತಮಗೆ ಕೋವಿಡ್‌ನಿಂದ ರಕ್ಷಣೆ ಒದಗಿಸಲು ಹಾಗೂ ಜೀವನ ಭದ್ರತೆಗಾಗಿ ಬಿಬಿಎಂಪಿ ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಿ ಪೌರಕಾರ್ಮಿಕರು ಬಾಣಸವಾಡಿ ಮುಖ್ಯ ರಸ್ತೆಯಲ್ಲಿ ಗುರುವಾರ ಪ್ರತಿಭಟನೆ ನಡೆಸಿದರು.

ಕೋವಿಡ್‌ನಿಂದ ರಕ್ಷಿಸಿಕೊಳ್ಳಲು ಮಾಸ್ಕ್‌, ಮುಖ ರಕ್ಷಾ ಕವಚ, ಕೈಗವಸು, ಸೋಂಕು ನಿವಾರಕ ದ್ರಾವಣ ಮುಂತಾದ ಸುರಕ್ಷತಾ ಸಾಧನಗಳನ್ನು ನೀಡಬೇಕು. ಜೀವನ ಭದ್ರತೆ ಒದಗಿಸಬೇಕು ಎಂದು ಪ್ರತಿಭಟನಕಾರರು ಒತ್ತಾಯಿಸಿದರು.

ಬಿಬಿಎಂಪಿಯ ಐದಕ್ಕೂ ಅಧಿಕ ಪೌರಕಾರ್ಮಿಕರು ಕೋವಿಡ್‌ಗೆ ಬಲಿಯಾಗಿದ್ದಾರೆ. ಬಿಬಿಎಂಪಿಯು ಕೋವಿಡ್‌ನಿಂದ ರಕ್ಷಣೆ ಒದಗಿಸುವ ಸುರಕ್ಷತಾ ಪರಿಕರಗಳನ್ನು ಒದಗಿಸುವ ಭರವಸೆ ನೀಡಿದೆ. ಆದರೆ, ಅದು ಇನ್ನೂ ಎಲ್ಲ ವಾರ್ಡ್‌ಗಳ ಪೌರಕಾರ್ಮಿಕರಿಗೆ ತಲುಪಿಲ್ಲ.

‘ಕೋವಿಡ್‌ ಎರಡನೇ ಅಲೆ ಕಾಣಿಸಿಕೊಂಡ ಬಳಿಕವಂತೂ ಗಲ್ಲಿ ಗಲ್ಲಿಯಲ್ಲೂ ಸೋಂಕಿತರು ಇದ್ದಾರೆ. ಅವರು ಕಸವನ್ನು ವೈಜ್ಞಾನಿಕವಾಗಿ ವಿಲೇವಾರಿ ಮಾಡುತ್ತಿಲ್ಲ. ಎಲ್ಲೆಂದರಲ್ಲಿ ಕಸ ಬಿಸಾಡುತ್ತಾರೆ. ಹಾಗಾಗಿ ಪೌರಕಾರ್ಮಿಕರು ಹಿಂದಿಗಿಂತಲೂ ಹೆಚ್ಚು  ಅಪಾಯ ಎದುರಿಸುತ್ತಿದ್ದಾರೆ’ ಎಂದು ಬಿಬಿಎಂಪಿ ಪೌರಕಾರ್ಮಿಕರ ಸಂಘದ ಅಧ್ಯಕ್ಷೆ ನಿರ್ಮಲಾ ಕಳವಳ ವ್ಯಕ್ತಪಡಿಸಿದರು.

ಪೌರಕಾರ್ಮಿಕರ ಪ್ರಮುಖ ಬೇಡಿಕೆಗಳು

* ಆರೋಗ್ಯ ಕಾರ್ಯಕರ್ತರಂತೆ ಪೌರಕಾರ್ಮಿಕರನ್ನೂ ಆಗಾಗ ಕೋವಿಡ್‌ ಪರೀಕ್ಷೆಗೆ ಒಳಪಡಿಸಬೇಕು

*ಕೋವಿಡ್‌ ಕರ್ತವ್ಯ ನಿರ್ವಹಿಸುವ ಇತರ ಸರ್ಕಾರಿ ನೌಕರರಿಗೆ ನೀಡುವಂತೆ ಪ್ರತಿ ತಿಂಗಳು ₹ 10 ಸಾವಿರ ಅಪಾಯ ಭತ್ಯೆ ನೀಡಬೇಕು

* ಪೌರಕಾರ್ಮಿಕರಿಗೂ ಸರ್ಕಾರ ₹ 50 ಲಕ್ಷ ವಿಮೆ ಭದ್ರತೆ ಒದಗಿಸಬೇಕು

* ಕೋವಿಡ್‌ನಿಂದ ರಕ್ಸಿಸಿಕೊಳ್ಳಲು ಅಗತ್ಯ ಸುರಕ್ಷತಾ ಸಾಮಗ್ರಿಗಳನ್ನು ಒದಗಿಸಬೇಕು

* ಕೋವಿಡ್‌ ಕಾಣಿಸಿಕೊಂಡ ಪೌರಕಾರ್ಮಿಕರಿಗೆ ಉಚಿತ ಚಿಕಿತ್ಸೆ ಒದಗಿಸಬೇಕು. ತುರ್ತು ಸಂದರ್ಭದಲ್ಲಿ ಚಿಕಿತ್ಸೆಗೆ ಹಾಸಿಗೆ ಒದಗಿಸಬೇಕು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು