ಭಾನುವಾರ, ಜೂನ್ 20, 2021
29 °C

'ಮನೆ ಮನೆಗೂ ಕೋವಿಡ್ ಗೈಡ್' ಕಿರುಹೊತ್ತಿಗೆ ಬಿಡುಗಡೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

prajavani

ಬೆಂಗಳೂರು: ಬಿಬಿಎಂಪಿಯ ಪಶ್ಚಿಮ ವಲಯದಲ್ಲಿ ಕೋವಿಡ್ ವ್ಯವಸ್ಥೆ ಕುರಿತು ಜನರಿಗೆ ಮಾಹಿತಿ ನೀಡುವ ಸಲುವಾಗಿ ಸಿದ್ಧಪಡಿಸಲಾಗಿರುವ 11 ಪುಟಗಳ ‘ಕೋವಿಡ್ ಗೈಡ್’ ಎಂಬ ಕಿರುಪುಸ್ತಕವನ್ನು ಉಪ ಮುಖ್ಯಮಂತ್ರಿ ಡಾ. ಸಿ.ಎನ್. ಅಶ್ವತ್ಥನಾರಾಯಣ ಶನಿವಾರ ಬಿಡುಗಡೆ ಮಾಡಿದರು.

ಈ ಕಿರುಪುಸ್ತಕದಲ್ಲಿ ಎಲ್ಲ ಇಲಾಖೆಗಳ ಸಂಪರ್ಕ ಸಂಖ್ಯೆಗಳು, ಪಾಲಿಕೆ ಮಾಹಿತಿ ಹಾಗೂ ಮಲ್ಲೇಶ್ವರ, ಗಾಂಧೀನಗರ, ರಾಜಾಜಿನಗರ, ಮಹಾಲಕ್ಷ್ಮೀ ಲೇಔಟ್, ವಿಜಯನಗರ, ಚಿಕ್ಕಪೇಟೆ ಕ್ಷೇತ್ರಗಳಲ್ಲಿ ಇರುವ ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳ ಮಾಹಿತಿ ಇದೆ. ಸೋಂಕು ಬಂದಾಗ ವಹಿಸಬೇಕಾದ ಮುನ್ನೆಚ್ಚರಿಕೆ ಕುರಿತ ವಿವರಗಳೂ ಇವೆ.

‘ಈ ಕಿರುಪುಸ್ತಕವನ್ನು ಪಶ್ಚಿಮ ವಲಯದ ಆರೂ ವಿಧಾನಸಭೆ ಕ್ಷೇತ್ರಗಳ ಮನೆಮನೆಗೂ ಹಂಚಲಾಗುವುದು’ ಎಂದು ಅಶ್ವತ್ಥನಾರಾಯಣ  ತಿಳಿಸಿದರು.

‘ಪಶ್ಚಿಮ ವಲಯದ ಸಹಾಯವಾಣಿಯನ್ನು (080-68248454) ದಿನದ 24 ಗಂಟೆಯೂ ಚಾಲ್ತಿಯಲ್ಲಿರುತ್ತದೆ. ಜನ ಇದರ ಸದುಪಯೋಗ ಪಡೆಯಬಹುದು’ ಎಂದು ಅವರು ತಿಳಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು