ಶುಕ್ರವಾರ, 2 ಜೂನ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಕಲಾತ್ಮಕ ಚಿತ್ರಗಳ ಮೇಲೂ ಕೋವಿಡ್‌ ಸಾಂಕ್ರಾಮಿಕದ ಕರಿನೆರಳು’

Last Updated 29 ಮಾರ್ಚ್ 2023, 20:13 IST
ಅಕ್ಷರ ಗಾತ್ರ

ಬೆಂಗಳೂರು: ಕಲಾತ್ಮಕ ಚಿತ್ರಗಳ ಮೇಲೂ ಕೋವಿಡ್‌ ಸಾಂಕ್ರಾಮಿಕ ಕರಿನೆರಳು ಬೀರಿದ್ದು, ಚಿತ್ರೋತ್ಸವಗಳ ಮೂಲಕ ಇಂತಹ ಚಿತ್ರಗಳಿಗೆ ಪ್ರೋತ್ಸಾಹ ನೀಡುತ್ತಿರುವುದು ಅಭಿನಂದನೀಯ ಕೆಲಸ ಎಂದು ಶ್ರೀಲಂಕಾದ ಚಿತ್ರ ನಿರ್ದೇ
ಶಕ ಜಯಸುಂದರ ವಿಮುಕ್ತಿ ಹೇಳಿದರು.

14ನೇ ಬೆಂಗಳೂರು ಅಂತರ ರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಮಾತನಾಡಿದ ಅವರು, ‘ಕೋವಿಡ್‌–19 ರ ನಂತರ ಕಲಾತ್ಮಕ ಚಿತ್ರಗಳು ಮತ್ತು ಚಿತ್ರೋತ್ಸವಗಳು ಅಪಾಯ ಎದುರಿಸುತ್ತಿವೆ. ಕೋವಿಡ್‌ ಎಂಬುದು ಒಟಿಟಿ ವೇದಿಕೆಗೆ ಬೃಹತ್‌ ದಾರಿ ಮಾಡಿ
ಕೊಟ್ಟಿದ್ದು, ಸಾಮಾಜಿಕ ಮಾಧ್ಯಮಗಳು ಮತ್ತು ಯೂಟ್ಯೂಬ್‌ನಂತಹ ವೇದಿಕೆ ಗಳಲ್ಲಿ ಚಿತ್ರಗಳು ಹರಿದಾಡುತ್ತಿವೆ. ಇದರ ನಡುವೆ ಚಿತ್ರೋತ್ಸವಗಳನ್ನು ಉಳಿಸಿಕೊಳ್ಳುವುದು ಕಷ್ಟದ ಕೆಲಸವಾಗಿದೆ’ ಎಂದರು.

ಚಿತ್ರೋತ್ಸವಗಳ ಉತ್ಸಾಹ ಕುಗ್ಗುತ್ತಿರುವುದು ಮತ್ತು ಡಿಜಿಟಲ್‌ ಮಾಧ್ಯಮ ಹಾಗೂ ಸಾಮಾಜಿಕ ಜಾಲತಾಣಗಳ ಪ್ರಭಾವದ ಕುರಿತು ವಿವರಿಸಿದ ಅವರು, ‘ಕನ್ನಡ ಚಿತ್ರರಂಗ ಈ ರೀತಿ ಚಿತ್ರೋತ್ಸವ ಆಯೋಜಿಸುತ್ತಿರುವುದು ಸಂತಸದ ಸಂಗತಿ. ಸಾಕಷ್ಟು ಭಾಷೆಗಳಲ್ಲಿ ಈ ಕೆಲಸ ಆಗುತ್ತಿಲ್ಲ’ ಎಂದರು.

ಇಸ್ರೇಲಿನ ವಿವಾದಿತ ಕಥೆ ಯೊಂದನ್ನು ಎತ್ತಿಕೊಂಡು ‘ಜುದಾಸ್‌’ ಸಿನಿಮಾ ನಿರ್ದೇಶಿಸಿರುವ ಡಾನ್‌ ವೋಲ್ಮನ್‌, ಜೆರುಸಲೇಂನ ಕಟ್ಟುಪಾಡುಗಳನ್ನು, ಕುಟುಂಬದಲ್ಲಿನ ಸಂಬಂಧಗಳು,ಪ್ರೀತಿ, ಪ್ರಣಯವನ್ನು ಚಿತ್ರದಲ್ಲಿ ಹೇಗೆ ಅಳವಡಿಸಿಕೊಳ್ಳಲಾಗಿದೆ ಎಂದು ಹೇಳಿದರು.

ಕೇರಳದ ಮುಡುಗ ಬುಡಕಟ್ಟು ಭಾಷೆಯ ಸಿನಿಮಾ ’ಆದಿವಾಸಿ’ ನಿರ್ದೇಶಕ ವಿಜೀಶ್‌ ಮಣಿ ಮಾತನಾಡಿ, ‘ಈ ರೀತಿಯ ಸಣ್ಣ ಬುಡಕಟ್ಟು ಸಮುದಾಯಗಳಲ್ಲಿ ಸಾಕಷ್ಟು ಸಮಸ್ಯೆಗಳಿರುತ್ತವೆ.ಹಸಿವು, ಬಡತನ, ಅವಮಾನ, ಪ್ರಾಕೃತಿಕ ಮತ್ತು ವಾತಾವರಣದಲ್ಲಿನ ಬದಲಾವಣೆಗಳು ಈ ಸಮುದಾಯಗಳ ಮೇಲೆ ಸಾಕಷ್ಟು ಪ್ರಭಾವ ಬೀರುತ್ತವೆ. ಇಂಥ ಸಮುದಾಯವನ್ನು ಸಮಾಜದ ಮುಖ್ಯವಾಹಿನಿಗೆ ಪರಿಚಯಿಸುವ ಯತ್ನವಾಗಬೇಕು. ಹೀಗಾಗಿ ತಾನು ಈ ರೀತಿ ಭಿನ್ನ ಸಮುದಾಯದ ಚಿತ್ರಗಳನ್ನು ಕೈಗೆತ್ತಿಕೊಳ್ಳುತ್ತೇನೆ’ ಎಂದರು.

ಇಸ್ರೇಲ್‌ ನಿರ್ದೇಶಕ ಡಾನ್‌ ವೋಲ್ಮನ್‌, ಶ್ರೀಲಂಕಾದ ನಿರ್ದೇಶಕ ವಿಶಕೇಸ ಚಂದ್ರಶೇಖರಂ ಮೊದಲಾದ
ವರು ಈ ಗೋಷ್ಠಿಯಲ್ಲಿ ಪಾಲ್ಗೊಂಡು ತಮ್ಮ ಸಿನಿಮಾಗಳ ಕುರಿತು ಮಾಹಿತಿ ಹಂಚಿಕೊಂಡರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT