ಬುಧವಾರ, ಆಗಸ್ಟ್ 4, 2021
20 °C

ಕೊರೊನಾ ನೋವು ಮರೆಸಲು ಆಸ್ಪತ್ರೆಯು ವಾರ್ಡ್‌ಗಳಲ್ಲಿ ಹಾಸ್ಯ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಕೊರೊನಾ ಸೋಂಕಿತರು ನೋವುಗಳನ್ನು ಮರೆತು, ಸಕಾರಾತ್ಮಕ ವಿಚಾರಧಾರೆಗಳನ್ನು ಹೊಂದಬೇಕೆಂಬ ಉದ್ದೇಶದಿಂದ ನಗರದ ಕೆ.ಸಿ. ಜನರಲ್ ಆಸ್ಪತ್ರೆಯು ವಾರ್ಡ್‌ಗಳಲ್ಲಿ ಟಿ.ವಿ ಅಳವಡಿಸಿ, ಹಾಸ್ಯ ಹಾಗೂ ಧಾರ್ಮಿಕ ಕಾರ್ಯಕ್ರಮಗಳ ವೀಕ್ಷಣೆಗೆ ಅವಕಾಶ ಮಾಡಿಕೊಟ್ಟಿದೆ. 

ಎರಡು ದಿನಗಳ ಹಿಂದಷ್ಟೇ ಅಲ್ಲಿ ವೃದ್ಧೆಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದರು. ಈ ಘಟನೆಯು ಉಳಿದ ರೋಗಿಗಳ ಮೇಲೆ ನಕಾರಾತ್ಮಕ ಪರಿಣಾಮ ಬೀರದಂತೆ ನೋಡಿಕೊಳ್ಳಲು ಮನೋವೈದ್ಯರು ಕೌನ್ಸೆಲಿಂಗ್ ನಡೆಸುತ್ತಿದ್ದಾರೆ. ಅದೇ ರೀತಿ, ರೋಗಿಗಳು ಒಟ್ಟಾಗಿ ಕುಳಿತು, ಟಿ.ವಿ ವೀಕ್ಷಿಸುವುದಕ್ಕೂ ವ್ಯವಸ್ಥೆ ಮಾಡಲಾಗಿದೆ. ವಿವಿಧ ಪೌರಾಣಿಕ ಧಾರಾವಾಹಿಗಳು, ನಾಟಕಗಳು, ಭಕ್ತಿಗೀತೆ
ಗಳು, ಚಲನಚಿತ್ರಗೀತೆಗಳು, ಹಾಸ್ಯ ಕಾರ್ಯಕ್ರಮಗಳನ್ನು ಪ್ರಸಾರ ಮಾಡಲಾಗುತ್ತಿದೆ. 

‘ಕೊರೊನಾ ಸೋಂಕಿತರಲ್ಲಿ ಕೆಲವರು ಸದಾ ಚಿಂತೆಯಲ್ಲಿರುತ್ತಾರೆ. ಇನ್ನೂ ಕೆಲವರು ನಕಾರಾತ್ಮಕ ವಿಚಾರವನ್ನು ತಲೆಯಲ್ಲಿ ತುಂಬಿಕೊಂಡು, ಆರೋಗ್ಯ ಹದಗೆಡಿಸಿಕೊಳ್ಳುತ್ತಾರೆ. ಹಾಗಾಗಿ ಸಕಾರಾತ್ಮಕ ವಿಚಾರ ಅವರಲ್ಲಿ ಮೂಡಬೇಕು ಎಂಬ ಕಾರಣಕ್ಕೆ ಟಿ.ವಿ ವೀಕ್ಷಣೆಗೆ ಅವಕಾಶ ಕಲ್ಪಿಸಲಾಗಿದೆ. ಯಾವುದೇ ಸುದ್ದಿ ವಾಹಿನಿಯನ್ನು ಹಾಕುತ್ತಿಲ್ಲ’ ಎಂದು ಆಸ್ಪತ್ರೆಯ ಸ್ಥಾನಿಕ ವೈದ್ಯಾಧಿಕಾರಿ ಡಾ. ಮೋಹನ್ ತಿಳಿಸಿದರು. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು