ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬ್ಯಾಂಕ್ ವಿವರ ನೀಡಿ ₹12 ಲಕ್ಷ ಕಳೆದುಕೊಂಡ ವೃದ್ಧೆ

ಕೆವೈಸಿ ಅಪ್‌ಡೇಟ್‌ ಮಾಡುವ ನೆಪದಲ್ಲಿ ವಂಚನೆ
Last Updated 30 ಜೂನ್ 2021, 20:14 IST
ಅಕ್ಷರ ಗಾತ್ರ

ಬೆಂಗಳೂರು: ಬ್ಯಾಂಕ್‌ ಖಾತೆಗೆ ಕೆವೈಸಿ (ಗ್ರಾಹಕರ ಮಾಹಿತಿ) ಅಪ್‌ಡೇಟ್‌ ಮಾಡುವುದಾಗಿ ತಿಳಿಸಿದಸೈಬರ್ ವಂಚಕರು, ವೃದ್ಧೆಯೊಬ್ಬರಿಂದ ಬ್ಯಾಂಕ್ ವಿವರಗಳನ್ನು ಪಡೆದು, ₹12.89 ಲಕ್ಷ ದೋಚಿರುವ ಘಟನೆ ನಗರದಲ್ಲಿ ನಡೆದಿದೆ.

ಜೆ.ಪಿ.ನಗರದಲ್ಲಿ ವಾಸವಿದ್ದ 69 ವರ್ಷದ ವೃದ್ಧೆಯೊಬ್ಬರ ಮೊಬೈಲ್‌ಗೆ ‘ತುರ್ತಾಗಿ ಕೆವೈಸಿ ಸಂಖ್ಯೆ ಅಪ್‌ಡೇಟ್ ಮಾಡಬೇಕು’ ಎಂಬ ಸಂದೇಶಜೂ.22ರಂದು ಬಂದಿತ್ತು. ಇದರಿಂದ ಗಾಬರಿಗೊಂಡ ವೃದ್ಧೆ, ಸಂದೇಶದಲ್ಲಿದ್ದ ಸಂಖ್ಯೆಗೆ ಕರೆ ಮಾಡಿದ್ದರು.

ಕರೆ ಸ್ವೀಕರಿಸಿದ್ದ ವ್ಯಕ್ತಿ ತಾನು ಬ್ಯಾಂಕ್ ಸಿಬ್ಬಂದಿ ಎಂದು ಪರಿಚಯಿಸಿಕೊಂಡಿದ್ದ. ನಿಮ್ಮ ಕೆವೈಸಿ ಸಂಖ್ಯೆ ಅಪ್‌ಡೇಟ್‌ ಮಾಡದಿದ್ದರೆ, ನಿಮ್ಮ ಬ್ಯಾಂಕ್‌ ಖಾತೆ ಬ್ಲಾಕ್‌ ಆಗಲಿದೆ. ನಿಮ್ಮ ವಿವರಗಳನ್ನು ಹೇಳಿದರೆ, ಅದನ್ನು ತಡೆಯುವುದಾಗಿ ತಿಳಿಸಿದ್ದ.

ಇದನ್ನು ನಂಬಿದ್ದ ವೃದ್ಧೆ, ತನ್ನ ಬ್ಯಾಂಕ್‌ ಖಾತೆಯ ಸಂಪೂರ್ಣ ವಿವರಗಳನ್ನು ಹಂಚಿಕೊಂಡಿದ್ದರು. ವೃದ್ಧೆ ನೀಡಿದ್ದ ಮಾಹಿತಿಯಿಂದ ಬ್ಯಾಂಕ್‌ಗೆ ಲಿಂಕ್ ಆಗಿದ್ದ ಮೊಬೈಲ್ ಸಂಖ್ಯೆಯ‌ನ್ನು ಬದಲಿಸಿ, ಅವರ ಖಾತೆಯಿಂದ ₹12.89 ಲಕ್ಷವನ್ನು ಬೇರೆ ಖಾತೆಗೆ ವರ್ಗಾಯಿಸಿಕೊಂಡಿದ್ದ.

ಈ ಸಂಬಂಧ ವೃದ್ಧೆ ನೀಡಿರುವ ದೂರಿನ ಮೇರೆಗೆ ದಕ್ಷಿಣ ಸೆನ್‌ ಠಾಣೆಯಲ್ಲಿ ವಂಚನೆ ಹಾಗೂಮಾಹಿತಿ ತಂತ್ರಜ್ಞಾನ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT