ಗುರುವಾರ , ಸೆಪ್ಟೆಂಬರ್ 19, 2019
29 °C

ಮರ ಕಡಿದ ವ್ಯಕ್ತಿ ವಿರುದ್ಧ ಕ್ರಿಮಿನಲ್ ಪ್ರಕರಣಕ್ಕೆ ಆದೇಶ

Published:
Updated:

ಬೆಂಗಳೂರು: ರಾಜರಾಜೇಶ್ವರಿ ನಗರದ ಬಿಇಎಂಎಲ್‌ 4ನೇ ಹಂತದಲ್ಲಿ ಕಾನೂನುಬಾಹಿರವಾಗಿ ಮರ ಕಡಿದ ವ್ಯಕ್ತಿ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸುವಂತೆ ಬಿಬಿಎಂಪಿ ಜಂಟಿ ಆಯುಕ್ತ ಬಾಲಶೇಖರ್ ಆದೇಶಿಸಿದ್ದಾರೆ.

35 ಅಡಿ ಎತ್ತರದ ಆರೋಗ್ಯಕರವಾದ ಮರವನ್ನು ವೀರಣ್ಣ ಎಂಬುವರು ಕಡಿಸುತ್ತಿದ್ದರು. ಅದನ್ನು ಕಂಡ ಪಕ್ಕದ ಮನೆಯವರು ಪ್ರಶ್ನಿಸಿದರು. ಅದಕ್ಕೆ ವೀರಣ್ಣ ಉಡಾಫೆಯಿಂದ ಉತ್ತರಿಸಿದ್ದಾರೆ. ಸ್ಥಳೀಯರು ದೂರು ನೀಡಿದ ಬಳಿಕ ಪೊಲೀಸರು ಮತ್ತು ಪಾಲಿಕೆ ಅಧಿಕಾರಿಗಳು ಸ್ಥಳಕ್ಕೆ ಬಂದರು.

‘ಅನುಮತಿ ಪಡೆಯದೆ ಮರ ಕಡಿಯಲಾಗಿದ್ದು, ಪ್ರಕರಣ ದಾಖಲಿಸುವಂತೆ ವಲಯ ಅರಣ್ಯಾಧಿಕಾರಿಗೆ ಸೂಚನೆ ನೀಡಿದ್ದೇನೆ’ ಎಂದು ಬಾಲಶೇಖರ್ ತಿಳಿಸಿದರು.

Post Comments (+)