ಭಾನುವಾರ, 16 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾರ್ಕ್ ಕಬ್ಬನ್ ಪ್ರತಿಮೆ ಸ್ಥಳಾಂತರ

Last Updated 28 ಜೂನ್ 2020, 21:44 IST
ಅಕ್ಷರ ಗಾತ್ರ

ಬೆಂಗಳೂರು: ಹೈಕೋರ್ಟ್ ಆವರಣದಲ್ಲಿದ್ದ ಸರ್.ಮಾರ್ಕ್ ಕಬ್ಬನ್ ಪ್ರತಿಮೆಯನ್ನು ಕಬ್ಬನ್ ಉದ್ಯಾನದ ಬ್ಯಾಂಡ್ ಸ್ಟ್ಯಾಂಡ್ ಬಳಿಗೆ ಭಾನುವಾರ ಸ್ಥಳಾಂತರಿಸಲಾಯಿತು.

'ಪ್ರತಿಮೆಯು ಕೋರ್ಟ್ ಆವರಣದಲ್ಲಿದ್ದ ಕಾರಣ ಪ್ರತಿವರ್ಷ ಆಗಸ್ಟ್ 23ರಂದು ಆಚರಿಸುವ ಕಬ್ಬನ್ ಜನ್ಮದಿನಾಚರಣೆ ವೇಳೆ ಕಲಾಪಗಳಿಗೆ ಅಡಚಣೆಯಾಗುತ್ತಿತ್ತು. ಪ್ರವಾಸಿಗರಿಗೂ ಕೋರ್ಟ್ ಆವರಣ ಪ್ರವೇಶಿಸಿ, ಪ್ರತಿಮೆ ವೀಕ್ಷಿಸಲು ಸಾಧ್ಯವಾಗುತ್ತಿರಲಿಲ್ಲ. ಹೀಗಾಗಿ, ನ್ಯಾಯಾಲಯ ಹಾಗೂ ಸರ್ಕಾರದ ನಿರ್ದೇಶನದ ಮೇರೆಗೆ ಪ್ರತಿಮೆ ಸ್ಥಳಾಂತರಿಸಿ, ಮರುಪ್ರತಿಷ್ಠಾಪನೆ ಮಾಡಲಾಗಿದೆ' ಎಂದು ತೋಟಗಾರಿಕೆ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT