ಸೋಮವಾರ, ಆಗಸ್ಟ್ 8, 2022
23 °C

ವಿಶೇಷ ಜಿಲ್ಲಾಧಿಕಾರಿ, ಸಿಐಡಿ ಡಿವೈಎಸ್ಪಿ ಹೆಸರಿನಲ್ಲಿ ನಕಲಿ ಖಾತೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಬೆಂಗಳೂರು ಉತ್ತರ ವಿಶೇಷ ಜಿಲ್ಲಾಧಿಕಾರಿ ಎಂ.ಕೆ.ಜಗದೀಶ್ ಮತ್ತು ಸಿಐಡಿ ಆರ್ಥಿಕ ವಿಭಾಗದ ಡಿವೈಎಸ್ಪಿ ಎಂ.ಎಚ್.ನಾಗ್ಟೆ ಅವರ ಹೆಸರು ಹಾಗೂ ಪೋಟೊ ಬಳಸಿಕೊಂಡು ಫೇಸ್‌ಬುಕ್‌ನಲ್ಲಿ ನಕಲಿ ಖಾತೆ ತೆರೆಯಲಾಗಿದ್ದು, ಈ ಸಂಬಂಧ ಸಿಐಡಿ ಸೈಬರ್ ವಿಭಾಗದಲ್ಲಿ ದೂರು ದಾಖಲಾಗಿದೆ.

‘ಅಸಲಿ ಖಾತೆಯಲ್ಲಿದ್ದ ಫೋಟೊವನ್ನು ಕದ್ದಿರುವ ವಂಚಕರು, ಅದೇ ಫೋಟೊವನ್ನೇ ನಕಲಿ ಖಾತೆಗೆ ಅಪ್‌ಲೋಡ್ ಮಾಡಿದ್ದಾರೆ. ಆ ಖಾತೆಯಿಂದ ಸ್ನೇಹಿತರು ಹಾಗೂ ಸಂಬಂಧಿಕರಿಗೆ ವಿಶೇಷ ಜಿಲ್ಲಾಧಿಕಾರಿ ಹಾಗೂ ಡಿವೈಎಸ್ಪಿ ಅವರ ಹೆಸರಿನಲ್ಲೇ ಸಂದೇಶ ಕಳುಹಿಸಿ ವಂಚಿಸಲಾಗಿದೆ’ ಎಂದು ಸೈಬರ್ ವಿಭಾಗದ ಮೂಲಗಳು ತಿಳಿಸಿವೆ.

‘ನಾನು ಕಷ್ಟದಲ್ಲಿದ್ದೇನೆ. ಸಹಾಯ ಬೇಕಿತ್ತು. ತುರ್ತಾಗಿ ಹಣ ಕಳುಹಿಸಿ’ ಎಂದು ಸಂದೇಶದಲ್ಲಿ ವಂಚಕರು ಬರೆದಿದ್ದಾರೆ. ಅದನ್ನು ನಿಜವೆಂದು ತಿಳಿದ ಕೆಲವರು, ವಂಚಕರು ನೀಡಿದ್ದ ಖಾತೆಗೆ ಹಣ ಜಮೆ ಮಾಡಿದ್ದಾರೆ’ ಎಂದೂ ಮೂಲಗಳು ಹೇಳಿವೆ. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು