ಶನಿವಾರ, ಜನವರಿ 23, 2021
28 °C

ಮುಚ್ಚಿದ ಸಂಪ್‌ಗಳು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ದಾಬಸ್ ಪೇಟೆ: ಇಲ್ಲಿನ ನರಸೀಪುರ ತೋಪಿನಲ್ಲಿ ನಿರ್ಮಾಣವಾಗುತ್ತಿರುವ ಹಾಲು ಶೀತಲೀಕರಣ ಘಟಕ (ಬಿಎಂಸಿ) ಕಟ್ಟಡದ ನೀರಿನ ಸಂಪ್‌ಗಳನ್ನು ಮುಚ್ಚಲಾಗಿದೆ.

ಈ ಕುರಿತು ‘ಬಾಯ್ತೆರೆದು ನಿಂತಿವೆ ಸಂಪ್‌ಗಳು!’ ಶೀರ್ಷಿಕೆ ಯಡಿ ‘ಪ್ರಜಾವಾಣಿ’ಯಲ್ಲಿ ಶನಿವಾರ (ಡಿ.2) ವರದಿ ಪ್ರಕಟವಾಗಿತ್ತು. ಇದರಿಂದ ಎಚ್ಚೆತ್ತುಕೊಂಡ ಡೇರಿ ಆಡಳಿತ ಮಂಡಳಿ ಹಾಗೂ ಕಟ್ಟಡದ ಗುತ್ತಿಗೆದಾರರು ಸಂಪ್‌ಗಳನ್ನು ಮುಚ್ಚಿದ್ದಾರೆ.

ಎರಡೂ ಸಂಪ್‌ಗಳು ಹಲವು ತಿಂಗಳಿನಿಂದ ಬಾಯ್ತೆರೆದುಕೊಂಡಿದ್ದವು. ಇದರಿಂದ ಮಕ್ಕಳು ಹಾಗೂ ಜನರಿಗೆ ಅಪಾಯ ತಪ್ಪಿದ್ದಲ್ಲ ಎಂದು ಸ್ಥಳೀಯರು ಆರೋಪಿಸಿದ್ದರು. 

ಪಂಚಾಯಿತಿ ಕಚೇರಿ ಹಿಂಭಾಗದಲ್ಲೇ ಬಿಎಂಸಿ ಕಟ್ಟಡ ನಿರ್ಮಾಣ ಮಾಡಲಾ ಗುತ್ತಿದೆ. ಸಮೀಪದಲ್ಲೇ ಅಂಚೆ ಕಚೇರಿ ಇದ್ದು, ಮಾಸಾಶನ ಪಡೆಯಲು ಜನ ಬರುತ್ತಾರೆ. ಸ್ವಲ್ಪ ಎಚ್ಚರ ತಪ್ಪಿದರೂ ಸಂಪ್‌ಗಳಿಂದ ಅಪಾಯ ಖಂಡಿತ. ಅನಾ ಹುತಕ್ಕೆ ಕಾರಣವಾಗುವ ಸಂಪ್‌ಗಳನ್ನು ಮುಚ್ಚಬೇಕು ಎಂದು ಆಗ್ರಹಿಸಿದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು