ಬೆಂಗಳೂರು: ಜೈಲಿನ ನಿಯಮದ ಪ್ರಕಾರವೇ ಎಲ್ಲಾ ಸೌಲಭ್ಯ ನೀಡಲಾಗಿದೆ ಎಂಬ ಕಾನೂನು ಸೇವಾ ಪ್ರಾಧಿಕಾರದ ವರದಿ ವಿಚಾರ ತಿಳಿದ ನಟ ದರ್ಶನ್, ಕೋಪಗೊಂಡು ಸಹ ಕೈದಿಗಳ ಜತೆ ಕೂಗಾಡಿದ್ದಾರೆ ಎಂದು ಹೇಳಲಾಗಿದೆ.

ಕಾನೂನು ಸೇವಾ ಪ್ರಾಧಿಕಾರದ ಅಧಿಕಾರಿಗಳು ಶನಿವಾರ ಕೋರ್ಟ್ಗೆ ವರದಿ ನೀಡಿದ್ದರು. ವಾಯುವಿಹಾರ ಹೊರತು ಪಡಿಸಿ ಜೈಲಿನ ನಿಯಮದ ಪ್ರಕಾರ ಆರೋಪಿಗೆ ಎಲ್ಲಾ ಸೌಲಭ್ಯ ನೀಡಲಾಗಿದೆ ಎಂದು ವರದಿಯಲ್ಲಿ ಉಲ್ಲೇಖಿಸಿತ್ತು. ಈ ವಿಚಾರ ಜೈಲಿನ ಟಿ.ವಿಯಲ್ಲಿ ಪ್ರಸಾರವಾಗಿತ್ತು. ಅದನ್ನು ಗಮನಿಸಿದ ಸಹ ಕೈದಿಗಳು ದರ್ಶನ್ಗೆ ಈ ವಿಚಾರ ತಿಳಿಸಿದ್ದಾರೆ.

ಅದರಿಂದ ಕುಪಿತಗೊಂಡ ದರ್ಶನ್, ‘ನನಗೆ ಯಾಕೆ ಈ ಶಿಕ್ಷೆ, ಹೀಗೆ ಜೈಲಿನಲ್ಲೇ ಸಾಯಬೇಕೆ?’ ಎಂದು ಕೂಗಾಡಿದ್ದಾರೆ. ಜತೆಯಲ್ಲಿದ್ದವರು ಅವರನ್ನು ಸಮಾಧಾನ ಪಡಿಸಿದ್ದಾರೆ ಎನ್ನಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.