ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣ: ಪಾರ್ಕಿಂಗ್ ಶುಲ್ಕ ಇಳಿಕೆ

Last Updated 14 ಫೆಬ್ರುವರಿ 2020, 20:12 IST
ಅಕ್ಷರ ಗಾತ್ರ

ಬೆಂಗಳೂರು: ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣದಲ್ಲಿ ದ್ವಿಚಕ್ರ ವಾಹನ ನಿಲುಗಡೆಗೆ ಏರಿಕೆ ಮಾಡಿದ್ದ ಶುಲ್ಕವನ್ನು ₹232 ರಿಂದ ₹120ಕ್ಕೆ ಇಳಿಕೆ ಮಾಡಲಾಗಿದೆ.

ಶುಲ್ಕ ಹೆಚ್ಚಳದ ವಿರುದ್ಧ ಸಾರ್ಜನಿಕರಿಂದ ಅಸಮಾಧಾನ ವ್ಯಕ್ತವಾಗಿತ್ತು. ಪಾರ್ಕಿಂಗ್ ಶುಲ್ಕ ದಿನಕ್ಕೆ ₹80 ಇತ್ತು. ಅದನ್ನು ಏಕಾಏಕಿ ₹232ಕ್ಕೆ ಹೆಚ್ಚಿಸಲಾಗಿತ್ತು. 2 ಗಂಟೆವರೆಗೆ ₹12 ಮತ್ತು ನಂತರದ 16 ಗಂಟೆವರೆಗೆ ಪ್ರತಿ ಗಂಟೆಗೆ ₹10 ಶುಲ್ಕ ಇತ್ತು. ಅದನ್ನು ₹15ಕ್ಕೆ ಹೆಚ್ಚಿಸಲಾಗಿತ್ತು. ಈಗ 2 ಗಂಟೆ ಬಳಿಕ 24 ಗಂಟೆವರೆಗೆ ಪ್ರತಿ ಎರಡು ಗಂಟೆಗೆ ₹10 ನಿಗದಿ ಮಾಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT