ಬೆಂಗಳೂರು: ಗ್ರಾಹಕರಿಗೆ ಆಹಾರ ತಲುಪಿಸಲು ಹೊರಟಿದ್ದ ಡೆಲಿವರಿ ಬಾಯ್ ಸುನೀಲ್ ರಾಥೋಡ್ ಎಂಬುವರನ್ನು ಅಡ್ಡಗಟ್ಟಿದ್ದ ದುಷ್ಕರ್ಮಿಗಳು, ಮಾರಕಾಸ್ತ್ರ ತೋರಿಸಿ ಬೆದರಿಸಿ ದ್ವಿಚಕ್ರ ವಾಹನ ಹಾಗೂ ನಗದು ಸುಲಿಗೆ ಮಾಡಿಕೊಂಡು ಪರಾರಿಯಾಗಿದ್ದಾರೆ.

ಘಟನೆ ಸಂಬಂಧ ಸುನೀಲ್, ಸಂಪಿಗೆಹಳ್ಳಿ ಠಾಣೆಗೆ ದೂರು ನೀಡಿದ್ದಾರೆ. ಮೂವರು ಅಪರಿಚಿತರ ವಿರುದ್ಧ ಪ್ರಕರಣ ದಾಖಲಾಗಿದೆ.

’ಉತ್ತರ ಕರ್ನಾಟಕದ ಸುನೀಲ್, ಥಣಿಸಂದ್ರದಲ್ಲಿ ನೆಲೆಸಿದ್ದರು. ನ. 1ರಂದು ರಾತ್ರಿ 12 ಗಂಟೆಗೆ ಗ್ರಾಹಕರೊಬ್ಬರು ಆಹಾರ ಕಾಯ್ದಿರಿಸಿದ್ದರು. ನಾಗವಾರ ಸರ್ವೀಸ್ ರಸ್ತೆಯಲ್ಲಿರುವ ಹೋಟೆಲ್ನಲ್ಲಿ ಆಹಾರ ಪೊಟ್ಟಣ ಪಡೆದಿದ್ದ ಸುನೀಲ್, ದ್ವಿಚಕ್ರ ವಾಹನದಲ್ಲಿ ತಿರುಮೇನಹಳ್ಳಿ ಕಡೆ ಹೊರಟಿದ್ದರು’ ಎಂದು ಪೊಲೀಸರು ಹೇಳಿದರು.

‘ಮಾರ್ಗಮಧ್ಯ ಅವರನ್ನು ಅಡ್ಡಗಟ್ಟಿದ್ದ ಮೂವರು, ಕುತ್ತಿಗೆಗೆ ಲಾಂಗ್ ಇಟ್ಟು ಬೆದರಿಸಿದ್ದರು. ₹ 1 ಸಾವಿರ ಕಿತ್ತುಕೊಂಡಿದ್ದರು. ನಂತರ, ದ್ವಿಚಕ್ರ ವಾಹನನ್ನು ಕಸಿದುಕೊಂಡು ಅದರ ಸಮೇತವೇ ಪರಾರಿಯಾಗಿದ್ದಾರೆ’ ಎಂದೂ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.