ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಗಳೂರಿನಲ್ಲಿ ಡೆಲ್ಟಾ ದೃಢಪಟ್ಟಿದ್ದ ವ್ಯಕ್ತಿ ನಾಪತ್ತೆ; ಬಿಬಿಎಂಪಿಗೆ ತಲೆನೋವು

Last Updated 7 ಆಗಸ್ಟ್ 2021, 1:28 IST
ಅಕ್ಷರ ಗಾತ್ರ

ಬೆಂಗಳೂರು: ಡೆಲ್ಟಾ ರೂಪಾಂತರ ತಳಿಯ ಕೊರೊನಾ ವೈರಾಣು ಸೋಂಕಿತ ವ್ಯಕ್ತಿಯು ಪತ್ತೆಯಾಗದಿರುವುದು ಬಿಬಿಎಂಪಿಗೆ ತಲೆನೋವಾಗಿ ಪರಿಣಮಿಸಿದೆ.

29 ವರ್ಷದ ವ್ಯಕ್ತಿಯೊಬ್ಬರಿಗೆ ಡೆಲ್ಟಾ ದೃಢಪಟ್ಟಿತ್ತು. ಅವರು ಆಸ್ಪತ್ರೆಯಿಂದ ಬಿಡುಗಡೆಯನ್ನೂ ಹೊಂದಿದ್ದರು. ಆದರೆ, ಈವರೆಗೆ ಅವರ ಸುಳಿವು ಇಲ್ಲದಿರುವುದು ಮತ್ತು ಅವರ ಮೊಬೈಲ್‌ ಫೋನ್‌ ಸ್ಥಗಿತಗೊಂಡಿರುವುದರಿಂದ ಬಿಬಿಎಂಪಿಯ ಅಧಿಕಾರಿಗಳು ಪೊಲೀಸರ ಮೊರೆ ಹೋಗಿದ್ದು, ಅವರನ್ನು ಪತ್ತೆ ಹೆಚ್ಚುವಂತೆ ಕೋರಿದ್ದಾರೆ.

‘ವ್ಯಕ್ತಿಯ ಮೊಬೈಲ್‌ ಫೋನ್‌ ಕಾರ್ಯಾಚರಣೆಯಲ್ಲಿದ್ದ ಕೊನೆಯ ಸ್ಥಳ ಮಾಗಡಿ ರಸ್ತೆ. ನಂತರ ಅವರ ಫೋನ್‌ ಸ್ಥಗಿತಗೊಂಡಿದೆ. ಆದರೆ, ಆ ವ್ಯಕ್ತಿ ನಮಗೆ ಉತ್ತರಹಳ್ಳಿಯ ವಿಳಾಸ ನೀಡಿದ್ದರು. ಮಾಗಡಿ ರಸ್ತೆಯ ಪ್ರದೇಶಗಳು ಪಶ್ಚಿಮ, ಆರ್.ಆರ್. ನಗರ ಮತ್ತು ದಾಸರಹಳ್ಳಿ ವಲಯದ ವ್ಯಾಪ್ತಿಗೆ ಬರುತ್ತವೆ. ಈಗ ನಾವು ಪೊಲೀಸರ ವರದಿ ಕಾಯುತ್ತಿದ್ದೇವೆ. ವ್ಯಕ್ತಿಯು ಪತ್ತೆಯಾಗಿ, ಅವರ ವಿಳಾಸ ಯಾವುದು ಎಂದು ದೃಢಪಟ್ಟರೆ, ಆ ವಲಯಕ್ಕೆ ಪ್ರಕರಣವನ್ನು ವರ್ಗಾಯಿಸಲಾಗುವುದು’ ಎಂದು ಬೊಮ್ಮನಹಳ್ಳಿ ವಲಯದ ಜಂಟಿ ಆಯುಕ್ತ ಎಂ. ರಾಮಕೃಷ್ಣ ‘ಪ್ರಜಾವಾಣಿ‘ಗೆ ತಿಳಿಸಿದರು.

‘ವ್ಯಕ್ತಿಯು ಈಗಾಗಲೇ ಆಸ್ಪ‍ತ್ರೆಯಿಂದ ಬಿಡುಗಡೆಯಾಗಿದ್ದಾರೆ. ಅಲ್ಲದೆ, ಇದು ಮೂರು ವಾರಗಳ ಹಿಂದಿನ ಪ್ರಕರಣ. ಅಂದರೆ, ಇದು ಸಕ್ರಿಯವಾಗಿಲ್ಲದ ಪ್ರಕರಣ. ವ್ಯಕ್ತಿಗೆ ಸಂಬಂಧಿಸಿದ ದಾಖಲೆಗಳನ್ನು ಪರಿಶೀಲಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು’ ಎಂದು ವಿಶೇಷ ಆಯುಕ್ತ (ಆರೋಗ್ಯ) ಡಿ. ರಂದೀಪ್ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT