ಗುರುವಾರ, 16 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಕುಟುಂಬದ ಕುಡಿ: ರಾಜೀವ್‌ ಗೌಡ

ಪ್ರಚಾರ ಸಭೆಯಲ್ಲಿ ಬೆಂಗಳೂರು ಉತ್ತರ ಕಾಂಗ್ರೆಸ್ ಅಭ್ಯರ್ಥಿ ರಾಜೀವ್‌ ಗೌಡ
Published 24 ಏಪ್ರಿಲ್ 2024, 16:03 IST
Last Updated 24 ಏಪ್ರಿಲ್ 2024, 16:03 IST
ಅಕ್ಷರ ಗಾತ್ರ

ಬೆಂಗಳೂರು: ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಕುಟುಂಬದ ಕುಡಿ ನಾನು. ನನಗೆ ಪ್ರಜಾಪ್ರಭುತ್ವ, ಸಂವಿಧಾನದ ಬಗ್ಗೆ ಬದ್ಧತೆ ರಕ್ತಗತವಾಗಿ ಬಂದಿದೆ. ಬ್ರಿಟಿಷರಿಗೆ ತಪ್ಪೊಪ್ಪಿಗೆ ಬರೆದುಕೊಟ್ಟವರು ಕಟ್ಟಿದ ಪಕ್ಷದ ಅಭ್ಯರ್ಥಿಗೆ ಈ ಬದ್ಧತೆ ಇರಲು ಸಾಧ್ಯವೇ ಎಂದು ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಎಂ.ವಿ. ರಾಜೀವ್‌ ಗೌಡ ಪ್ರಶ್ನಿಸಿದರು.

ಕೆ.ಆರ್.ಪುರಂ ವಿಧಾನಸಭಾ ಕ್ಷೇತ್ರದ ತರಕಾರಿ ಮಾರುಕಟ್ಟೆ, ಚಿಕ್ಕದೇವಸಂದ್ರ, ಟಿ.ಸಿ. ಪಾಳ್ಯ, ಕಲ್ಕೇರೆ ಮುಖ್ಯರಸ್ತೆ ಸುತ್ತಮುತ್ತ ಆಯೋಜಿಸಿದ್ದ ಪ್ರಚಾರ ಸಭೆಗಳಲ್ಲಿ ಅವರು ಮಾತನಾಡಿದರು.

‘ಈ ಕ್ಷೇತ್ರದಿಂದ ಕಾಂಗ್ರೆಸ್‌ನಿಂದ ಆಯ್ಕೆಯಾಗಿದ್ದ ಕೇಶವ ಅಯ್ಯಂಗಾರ್‌, ಕೆಂಗಲ್ ಹನುಮಂತಯ್ಯ, ಜಾಫರ್ ಷರೀಫರಂತಹ ಸಜ್ಜನರು ನೀಡಿದ್ದ ಕೊಡುಗೆಗಳು ಈಗಲೂ ಜನಮಾನಸದಲ್ಲಿ ಉಳಿದಿದೆ. ಆದರೆ, ಇತ್ತೀಚಿನ ಎರಡು ದಶಕದಲ್ಲಿ ನಿಮಗೆಲ್ಲ ಸುಳ್ಳು ಭರವಸೆ ನೀಡಿ ಹೋದ ಸಂಸದರು ಏನೂ ಮಾಡಿಲ್ಲ. ಅವರಂತೆ ನಾನು ಮೋಸ ಮಾಡುವ, ಮೈಗೆ ಎಣ್ಣೆ ಹಚ್ಚಿಕೊಂಡು ತಪ್ಪಿಸಿಕೊಳ್ಳುವ ಜಾಯಮಾನದವನಲ್ಲ. ನಿಮ್ಮೆಲ್ಲರ ಧ್ವನಿಯಾಗಿ ಕೆಲಸ ಮಾಡುತ್ತೇನೆ’ ಎಂದು ತಿಳಿಸಿದರು.

ರಾಜರಾಜೇಶ್ವರಿನಗರ ವರದಿ: ಹೆಮ್ಮೆಗೆಪುರ ವಾರ್ಡ್ ವ್ಯಾಪ್ತಿಯಲ್ಲಿ ಎಂ.ವಿ. ರಾಜೀವ್‌ ಗೌಡ ಮತ ಯಾಚಿಸಿದರು. ‘ನನ್ನ ದೊಡ್ಡಪ್ಪ ಎಂ.ವಿ. ಕೃಷ್ಣಪ್ಪ ಅವರು ಜನಪ್ರತಿನಿಧಿಯಾಗಿದ್ದಾಗ ಹೈನು ಮತ್ತು ರೇಷ್ಮೆ ಕ್ಷೇತ್ರಕ್ಕೆ ಹೆಚ್ಚು ಒತ್ತು ನೀಡಿದ್ದರು. ಇದರಿಂದಾಗಿ ರೈತರು, ಯುವಜನರು, ಹೆಣ್ಣು ಮಕ್ಕಳು ಸ್ವಯಂ ಉದ್ಯೋಗ ಕಂಡುಕೊಂಡು ಉತ್ತಮ ಜೀವನ ಸಾಗಿಸುತ್ತಿದ್ದಾರೆ’ ಎಂದು ನೆನಪು ಮಾಡಿಕೊಂಡರು.

ನರೇಂದ್ರಮೋದಿ ಅವರು ಯಾವುದೇ ಅಭಿವೃದ್ದಿ ಕೆಲಸ ಮಾಡದೆ, ಸುಳ್ಳು ಹೇಳುತ್ತಾ 10 ವರ್ಷ ಅಧಿಕಾರ ನಡೆಸಿದರು. ಈಗ ಮೋದಿ ಗ್ಯಾರಂಟಿ ಎಂದು ಹೇಳಿಕೊಂಡು ಮತದಾರರನ್ನು ದಾರಿ ತಪ್ಪಸುತ್ತಿದ್ದಾರೆ ಎಂದು ಟೀಕಿಸಿದರು.

ಕಾಂಗ್ರೆಸ್ ಮುಖಂಡ ಬಿ.ಆರ್. ಶಿವಮಾದಯ್ಯ, ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಎಂ. ಸದಾನಂದ, ಪಾಲಿಕೆ ಮಾಜಿ ಸದಸ್ಯ ಆರ್ಯ ಶ್ರೀನಿವಾಸ್ ಲಕ್ಕಣ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಮೃತ್ ಗೌಡ, ಬೆಂಗಳೂರು ಉತ್ತರ ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ, ರೋಹಿಣಿ ಸುರೇಶ್, ಬ್ಲಾಕ್ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಮಮತಾ, ಕಾಂಗ್ರೆಸ್ ಮುಖಂಡ ಚಿಕ್ಕೇಗೌಡನ ಪಾಳ್ಯ, ರಾಮು ಭಾಗವಹಿಸಿದ್ದರು.

ರಾಜರಾಜೇಶ್ವರಿನಗರ: ಈ ಕ್ಷೇತ್ರದ ಅಭಿವೃದ್ದಿಗೆ ನಮ್ಮ ಕುಟುಂಬ ಸೇವೆ ಮಾಡಿದ್ದು ಮೂಲ ಸೌಕರ್ಯ ನೀಡಲು ಒಮ್ಮೆ ನನಗೂ ಅವಕಾಶ ಮಾಡಿಕೊಡಿ ಎಂದು ಬೆಂಗಳೂರು ಉತ್ತರ ಲೋಕಸಭಾ ಕಾಂಗ್ರೆಸ್ ಅಭ್ಯರ್ಥಿ ಎಂ.ವಿ. ರಾಜೀವ್‍ಗೌಡ ಅವರು ಮನವಿ ಮಾಡಿದರು.ಹೆಮ್ಮೆಗೆಪುರ ವಾರ್ಡ್ ವ್ಯಾಪ್ತಿಯಲ್ಲಿ ಮತಯೊಚನೆಮಾಡಿದ ಅವರು ನಮ್ಮ ದೊಡ್ಡಪ್ಪ ಎಂ.ವಿ. ಕೃಷ್ಣಪ್ಪ ಅವರು ಹೈನು ಮತ್ತು ರೇಷ್ಮೆ ತರುವಲ್ಲಿ ಪ್ರಮುಖ ಪಾತ್ರವಹಿಸಿದರಿಂದ ರೈತರು ಯುವಜನಾಂಗ ಹೆಣ್ಣು ಮಕ್ಕಳು ಸ್ವಯಂ ಉದ್ಯೋಗ ಕಂಡು ಕೊಂಡು ಉತ್ತಮ ಜೀವನಸಾಗಿಸುತ್ತಿದ್ದಾರೆ. ಕಾಂಗ್ರೆಸ್ ಕೇಂದ್ರದಲ್ಲಿ ಅಧಿಕಾರ ಹಿಡಿಯುವುದು ಖಚಿತವಾಗಿದ್ದು. ಕೇಂದ್ರ ರಾಜ್ಯದಲ್ಲಿ ಒಂದೇ ಸರ್ಕಾರ ವಿದ್ದರೆ ಬೆಂಗಳೂರು ನಗರವನ್ನು ಮಾದರಿ ಕ್ಷೇತ್ರವಾಗಲು ಸಾಧ್ಯ ಆದರಿಂದ ಕಾಂಗ್ರೆಸ್ ಗೆಲ್ಲಿಸುವ ಮೂಲಕ ಅಭಿವೃದ್ದಿ ಬೆಂಬಲಿಸಿ ಹತ್ತು ವರ್ಷದಲ್ಲಿ ನರೇಂದ್ರಮೋದಿ ಅವರು ಯಾವುದೇ ಅಭಿವೃದ್ದಿ ಕೆಲಸ ಮಾಡದೆ ಸುಳ್ಳು ಹೇಳುತ ಮೋದಿ ಗ್ಯಾರಂಟಿ ಎಂದು ಹೇಳಿಕೊಂಡು ಮತದಾರರನ್ನು ದಾರಿ ತಪ್ಪಸುತ್ತಿದ್ದಾರೆ ಎಂದು ಟೀಕಿಸಿದರು.ಕಾಂಗ್ರೆಸ್ ಮುಖಂಡ ಬಿ.ಆರ್ ಶಿವಮಾದಯ್ಯ ನುಡಿದಂತೆ ನಡೆಯುವ ಸರ್ಕಾರ ಕಾಂಗ್ರೆಸ್ ಕೇಂದ್ರದಲ್ಲಿಯೂ ಅಧಿಕಾರಕ್ಕೆ ಬಂದರೆ ಹೆಣ್ಣು ಮಕ್ಕಳಿಗೆ ವಾರ್ಷಿಕ ಒಂದು ಲಕ್ಷ ಉದ್ಯೋಗ 25ಲಕ್ಷ ಉಚಿತ ಆರೋಗ್ಯವಿಮೆ. ರೈತರ ಸಾಲಮನ್ನಾ ಕೃಷಿ ಅಭಿವೃದ್ದಿಗಾಗಿ ಕಾಂಗ್ರೆಸ್‍ಗೆ ಮತ ನೀಡಿ ಎಂದರು.ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಎಂಸದಾನಂದ ಪಾಲಿಕೆ ಮಾಜಿ ಸದಸ್ಯ ಆರ್ಯ ಶ್ರೀನಿವಾಸ್ ಲಕ್ಕಣ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಮೃತ್ ಗೌಡ ಬೆಂಗಳೂರು ಉತ್ತರ ಜಿಲ್ಲಾ ಮಹಿಳ ಕಾಂಗ್ರೆಸ್ ಅಧ್ಯಕ್ಷೆ ರೋಹಿಣಿ ಸುರೇಶ್ ಬ್ಲಾಕ್ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಮಮತ ಕಾಂಗ್ರೆಸ್ ಮುಖಂಡ ಚಿಕ್ಕೇಗೌಡನ ಪಾಳ್ಯ ರಾಮು ಇದ್ದರು ಚಿತ್ರ : ಬೆಂಗಳೂರು ಉತ್ತರ ಲೋಕಸಭಾ ಕಾಂಗ್ರೆಸ್ ಅಭ್ಯರ್ಥಿ ಎಂ.ವಿ.ರಾಜೀವ್ ಗೌಡ ಮತ ಯಾಚನೆ ಮಾಡಿದ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡರಾದ ಆರ್ಯ ಶ್ರೀನಿವಾಸ್ ಬಿ.ಆರ್. ಶಿವಮಾದಯ್ಯ ಲಕ್ಕಣ್ಣ ಸನ್ಮಾನಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT